ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜ್ಪೆ ವಿಮಾನ ನಿಲ್ದಾಣವೀಗ ‘ಕಸ್ಟಮ್ಸ್‌ ಏರ್‌ಪೋರ್ಟ್‌’

By Staff
|
Google Oneindia Kannada News

ಬಜ್ಪೆ ವಿಮಾನ ನಿಲ್ದಾಣವೀಗ ‘ಕಸ್ಟಮ್ಸ್‌ ಏರ್‌ಪೋರ್ಟ್‌’
ಮೇ 21ರಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಸೇವೆ, ಮಂಗಳೂರು-ದುಬೈ ನಡುವೆ ಸಂಚಾರ

ಮಂಗಳೂರು : 54 ವರ್ಷಗಳ ಇತಿಹಾಸವಿರುವ ನಗರದ ಬಜ್ಪೆ ವಿಮಾನ ನಿಲ್ದಾಣಕ್ಕೆ, ಕೇಂದ್ರ ಸರ್ಕಾರ ಕಸ್ಟಮ್ಸ್‌ ಏರ್‌ಪೋರ್ಟ್‌ ಸ್ಥಾನಮಾನ ನೀಡಿದೆ.

ಬೆಂಗಳೂರು ಹೊರತು ಪಡಿಸಿದರೆ ಇದು ರಾಜ್ಯದ ಎರಡನೇ ಕಸ್ಟಮ್ಸ್‌ ಏರ್‌ಪೋರ್ಟ್‌ ಎಂಬುದು ಗಮನಾರ್ಹ ಸಂಗತಿ. ಈ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ, ಇನ್ನು ಮುಂದೆ ಈ ನಿಲ್ದಾಣದಿಂದ ವಿಮಾನಗಳು ಅಂತಾರಾಷ್ಟ್ರೀಯ ಹಾರಾಟ ಆರಂಭಿಸಬಹುದಾಗಿದೆ.

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ(ಏರ್‌ಪೋರ್ಟ್ಸ್‌ ಅಥಾರಿಟಿ ಆಫ್‌ ಇಂಡಿಯಾ) ಮೂಲಸೌಕರ್ಯಗಳನ್ನು ಒದಗಿಸಲಿದೆ. ಏರ್‌ ಇಂಡಿಯಾದ ಕಡಿಮೆ ದರ ಸೇವೆಯ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌, ಸದ್ಯಕ್ಕೆ ಮಂಗಳೂರು-ದುಬೈ ನಡುವೆ ವಿಮಾನಯಾನ ಸೇವೆ ನೀಡಲಿದೆ.

ಮೇ 21ರಂದು ದುಬೈನಿಂದ ಮೊದಲ ಹಾರಾಟ ಆರಂಭಿಸುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ, ಬಜ್ಪೆಗೆ ಬೆಳಗ್ಗೆ 8.20ಕ್ಕೆ ತಲುಪಲಿದೆ. ರಾತ್ರಿ 9.20ಕ್ಕೆ ಮರಳಿ ದುಬೈನತ್ತ ಪಯಣಿಸಲಿದೆ.

ಮೊದಲ ಖಾಸಗಿ ವಿಮಾನ ನಿಲ್ದಾಣ : ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ರಾಜ್ಯದ ಮೊದಲ ಖಾಸಗಿ ವಿಮಾನ ನಿಲ್ದಾಣ ಹಾಗೂ ವಿಮಾನ ಚಾಲಕರ ತರಬೇತಿ ಕೇಂದ್ರ ಸ್ಥಾಪನೆಗೆ ಕೇಂದ್ರದ ಅನುಮತಿ ಕೋರುವುದಾಗಿ ಉದ್ಯಮಿ ಮತ್ತು ಶಾಸಕ ಸತೀಶ್‌ ಜಾರಕಿಹೊಳೆ ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X