• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಧಾನಿ ಸುತ್ತಮುತ್ತ 5 ಉಪನಗರ, 2 ರಿಂಗ್‌ ರೋಡ್‌

By Staff
|

ರಾಜಧಾನಿ ಸುತ್ತಮುತ್ತ 5 ಉಪನಗರ, 2 ರಿಂಗ್‌ ರೋಡ್‌

ಮೇ 25ರಂದು ಯೋಜನೆಗೆ ಚಾಲನೆ, ಅಂದಾಜು ವೆಚ್ಚ 36 ಸಾವಿರ ಕೋಟಿ -ಎಚ್‌ಡಿಕೆ

ಬೆಂಗಳೂರು : ನಗರದ ಹೊರವಲಯದಲ್ಲಿ ಐದು ಉಪನಗರ ಹಾಗೂ ಎರಡು ಹೊರವರ್ತುಲ ರಸ್ತೆ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಂದಗುಡಿ, ಸಾತನೂರು, ಬಿಡದಿ, ಕಸಬಾ ಹಾಗೂ ಸೋಲೂರು ಮೊದಲಾದ ಪ್ರದೇಶಗಳು ಉಪನಗರಗಳಾಗಿ ತಲೆ ಎತ್ತಲಿವೆ ಎಂದರು.

ರಾಜಧಾನಿ ನಗರದಲ್ಲಿ ಎರಡು ಹೊರವರ್ತುಲ ರಸ್ತೆಗಳನ್ನೂ ನಿರ್ಮಿಸಲಾಗುವುದು. ಈ ಸಂಬಂಧ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದ್ದು, ರಸ್ತೆ ಮತ್ತು ಉಪನಗರ ಯೋಜನೆಯ ಅಂದಾಜು ವೆಚ್ಚ 36 ಸಾವಿರ ಕೋಟಿ ರೂಪಾಯಿ ಎಂದು ವಿವರಿಸಿದರು.

ಮೇ 25ರಂದು ಯೋಜನೆಗೆ ಚಾಲನೆ ದೊರೆಯಲಿದೆ. ಮೇ ಅಂತ್ಯದಲ್ಲಿ ಸಮೀಕ್ಷೆ ಆರಂಭವಾಗಲಿದ್ದು, ಅದು ಪೂರ್ಣಗೊಳ್ಳುತ್ತಿದ್ದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಈ ಯೋಜನೆಗಳಿಂದ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಸ್ತೆಗಳು ಎಲ್ಲಿಂದ ಎಲ್ಲಿಗೆ? : ನೂತನ ವರ್ತುಲ ರಸ್ತೆಗಳ ನೀಲನಕ್ಷೆ ಸಿದ್ಧವಿದೆ. 283 ಕಿ.ಮೀ ಉದ್ದದ ಮೊದಲ ವರ್ತುಲ ರಸ್ತೆ ಡಾಬಸ್‌ಪೇಟೆ, ಮಾಗಡಿ, ರಾಮನಗರ, ಕನಕಪುರ, ಆನೇಕಲ್‌, ಅತ್ತಿಬೆಲೆ, ಸರ್ಜಾಪುರ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರದ ಮೂಲಕ ಡಾಬಸ್‌ ಪೇಟೆಯನ್ನು ಜೋಡಿಸಲಿದೆ.

178ಕಿ.ಮೀ ಉದ್ದದ ಎರಡನೇ ವರ್ತುಲ ರಸ್ತೆ ನೆಲಮಂಗಲ, ತಾವರೆಕೆರೆ, ಹಾರೋಹಳ್ಳಿ, ತಟ್ಟೆಕೆರೆ, ಸರ್ಜಾಪುರ, ಹೊಸಕೋಟೆ, ಮಲ್ಲಾಪುರ, ಅರದೇಹಳ್ಳಿ ಮೂಲಕ ನೆಲಮಂಗಲವನ್ನು ಸೇರಲಿದೆ.

(ಏಜೆನ್ಸೀಸ್‌)

ಮುಖಪುಟ / ಕುಮಾರ-ಪರ್ವ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more