ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೊಂದು ‘ಬಿಜೆಪಿ’ : ಉಮಾ ನೂತನ ಪಕ್ಷದ ದಿಕ್ಕೇನು?

By Staff
|
Google Oneindia Kannada News

ಇನ್ನೊಂದು ‘ಬಿಜೆಪಿ’ : ಉಮಾ ನೂತನ ಪಕ್ಷದ ದಿಕ್ಕೇನು?
ಬಿಜೆಪಿ ಉಳಿವಿಗೆ ಈ ನೂತನ ಪಕ್ಷ ಅನಿವಾರ್ಯ -ಉಮಾಭಾರತಿ

ಉಜ್ಜಯನಿ : ನಿರೀಕ್ಷೆಯಂತೆಯೇ ಉಚ್ಚಾಟಿತ ಬಿಜೆಪಿ ನಾಯಕಿ ಉಮಾಭಾರತಿ, ಹೊಸ ಪಕ್ಷವನ್ನು ಆರಂಭಿಸಿದ್ದಾರೆ. ಆ ಮೂಲಕ ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಪಾಲಿಗೆ ಉಮಾರ ನೂತನ ಪಕ್ಷ ಅಡ್ಡಗಾಲು ಹಾಕುವುದೆ ಎಂಬುದನ್ನು ಕಾದು ನೋಡಬೇಕು.

ತಮ್ಮ ಪಕ್ಷಕ್ಕೆ ಭಾರತೀಯ ಜನಶಕ್ತಿ ಪಕ್ಷ ಎಂದು ನಾಮಕರಣ ಮಾಡಿರುವ ಅವರು, ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಧಿಕೃತವಾಗಿ ಭಾನುವಾರ ಘೋಷಿಸಿದರು. ಬಿಜೆಪಿಯನ್ನು ಉಳಿಸುವ ಉದ್ದೇಶದಿಂದ ನೂತನ ಪಕ್ಷವನ್ನು ಸ್ಥಾಪಿಸಿದ್ದಾಗಿ ಉಮಾ ಹೇಳಿದ್ದಾರೆ.

ನೂತನ ಪಕ್ಷಕ್ಕೆ ಉಮಾಭಾರತಿ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂಘಪ್ರಿಯ ಗೌತಮ್‌, ಪ್ರಧಾನ ಕಾರ್ಯದರ್ಶಿಯಾಗಿ ರಘುನಂದನ್‌ ಶರ್ಮ, ಕೋಶಾಧ್ಯಕ್ಷರಾಗಿ ಅನಿತಾ ಸಿಂಗ್‌ರನ್ನು ನೇಮಕ ಮಾಡಲಾಗಿದೆ.

ಕೇಸರಿ ಬಣ್ಣದ ನಡುವೆ ಪ್ರಜ್ವಲಿಸುವ ಸೂರ್ಯನ ಲಾಂಛನವಿರುವ ಪಕ್ಷದ ಧ್ವಜವನ್ನು ಉಮಾ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X