ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೌದಪ್ಪ ಹೌದು, ಪೆಪ್ಸಿ ಬಾಟಲಲ್ಲಿ ಕಾಂಡೊಮ್‌ ಇತ್ತು!

By Staff
|
Google Oneindia Kannada News

ಹೌದಪ್ಪ ಹೌದು, ಪೆಪ್ಸಿ ಬಾಟಲಲ್ಲಿ ಕಾಂಡೊಮ್‌ ಇತ್ತು!
ಗ್ರಾಹಕನಿಗೆ ಒಂದು ಲಕ್ಷ ಪರಿಹಾರ ನೀಡಲು ನ್ಯಾಯಾಲಯದ ತೀರ್ಪು

ನವದೆಹಲಿ : ತಂಪು ಪಾನೀಯದ ಬಾಟಲಿಗಳಲ್ಲಿ ಜಿರಲೆ, ಹಲ್ಲಿ... ಹೀಗೆ ಏನೇನೋ ಸಿಕ್ತಾ ಇದೆ ಅನ್ನೋ ಮಾತನ್ನು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಈಗ ಪೆಪ್ಸಿ ಬಾಟಲಿಯಲ್ಲಿ ಕಾಂಡೊಮ್‌ ಪತ್ತೆಯಾಗಿದೆ!

ಹೌದು, ಮೊಹರು ಮಾಡಿದ್ದ ಬಾಟಲಿಯಲ್ಲಿ ಕಾಂಡೊಮ್‌ ಕಂಡು ಬಂದಿರುವ ಹಿನ್ನೆಲೆಯಲ್ಲಿ, ಪೆಪ್ಸಿ ಕಂಪನಿ ಪೇಚಿಗೆ ಸಿಲುಕಿದೆ. ಈ ಬಾಟಲಿ ಖರೀದಿಸಿದ್ದ ಗ್ರಾಹಕನಿಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕಾದ ಅನಿವಾರ್ಯತೆ ಕಂಪನಿಗೆ ಬಂದಿದೆ.

ಹಿನ್ನೆಲೆ : 2003ರಲ್ಲಿ ದೆಹಲಿಯ ಕಾಶ್ಮೀರ್‌ ಗೇಟ್‌ ಬಳಿ, ಎರಡು ಬಾಟಲಿ ಪೆಪ್ಸಿಯನ್ನು ಸುದೇಶ್‌ ಶರ್ಮಾ ಖರೀದಿಸಿದ್ದರು. ಒಂದು ಬಾಟಲಿ ಪೆಪ್ಸಿ ಸೇವಿಸಿದ ಶರ್ಮಾ, ಅಸ್ವಸ್ಥರಾದರು. ಅನುಮಾನದಿಂದ ಮತ್ತೊಂದು ಬಾಟಲಿಯಲ್ಲಿದ್ದ ಪೆಪ್ಸಿಯನ್ನು ಪರಿಶೀಲಿಸಿದಾಗ, ಕಸ-ಕಡ್ಡಿಗಳ ನಡುವೆ ಕಾಂಡೊಮ್‌ ಇರುವುದು ಪತ್ತೆಯಾಗಿತ್ತು.

ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಶರ್ಮಾ, ನ್ಯಾಯ ಕೋರಿದ್ದರು. ಪೆಪ್ಸಿ ಕಂಪನಿಗೆ ದಂಡ ವಿಧಿಸುವ ಮೂಲಕ, ನ್ಯಾಯಾಲಯ, ತಂಪು ಪಾನೀಯ ಕಂಪನಿಗಳ ಬೇಜವಾಬ್ದಾರಿಯನ್ನು ಎತ್ತಿ ಹಿಡಿದಿದೆ.

(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X