• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಸವರಾಜು, ಅಜಯಕುಮಾರ್‌ ಸಿಂಗ್‌ಗೆ ಬಸವ ಪ್ರಶಸ್ತಿ

By Staff
|

ಬಸವರಾಜು, ಅಜಯಕುಮಾರ್‌ ಸಿಂಗ್‌ಗೆ ಬಸವ ಪ್ರಶಸ್ತಿ

ಏಪ್ರಿಲ್‌ 30ರಂದು ಪ್ರಶಸ್ತಿ ಪ್ರದಾನ, ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ

ಬೆಂಗಳೂರು : ಹಿರಿಯ ಸಾಹಿತಿ ಹಾಗೂ ವಿಚಾರವಾದಿ ಪ್ರೊ.ಎಲ್‌.ಬಸವರಾಜು ಅವರು, 2005ನೇ ಸಾಲಿನ ಬಸವ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ವೆಂ.ಶ್ರೀನಿವಾಸ ಅವರು, ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದರು.

ಡಾ.ಪಿ.ಎಸ್‌.ರಾಮಾನುಜಂ ನೇತೃತ್ವದ ಸಮಿತಿ ಬಸವರಾಜು ಅವರ ಹೆಸರನ್ನು ಶಿಫಾರಸು ಮಾಡಿದ್ದು, ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಏಪ್ರಿಲ್‌ 30ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವಿವರಿಸಿದರು.

ಪ್ರಶಸ್ತಿಯು 1.50 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪತ್ರ, ಫಲಕ ಮೊದಲಾದ ಸ್ಮರಣಿಕೆಗಳನ್ನು ಒಳಗೊಂಡಿದೆ. ಪ್ರೊ.ಎಲ್‌.ಬಸವರಾಜು ವಚನ ಸಾಹಿತ್ಯ ಹಾಗೂ ವಿಚಾರ ಸಾಹಿತ್ಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದು, ಪ್ರಖರ ವಿಚಾರವಾದಿ ಎಂದೇ ಹೆಸರಾದವರು.

ಇನ್ನಷ್ಟು ಪ್ರಶಸ್ತಿಗಳು :

  • ಬಸವವೇದಿಕೆ ವತಿಯಿಂದ ನೀಡಲಾಗುತ್ತಿರುವ ಪ್ರತಿಷ್ಠಿತ ‘ಬಸವಶ್ರೀ ಪ್ರಶಸ್ತಿ’ಗೆ ಕೇರಳ ಹೈಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಾಮೂರ್ತಿ ಡಾ.ವಿ.ಎಸ್‌.ಮಳಿಮಠ ಅವರನ್ನು ಆಯ್ಕೆ ಮಾಡಲಾಗಿದೆ.
  • ಶರಣ ಸಾಹಿತ್ಯದಲ್ಲಿ ಕೃಷಿ ಮಾಡಿರುವ ಮಾಜಿ ಸಚಿವೆ ಲೀಲಾದೇವಿ ಆರ್‌ ಪ್ರಸಾದ್‌ ಹಾಗೂ ‘ಅಲ್ಲಮ ಪ್ರಭು ಮತ್ತು ಕಬೀರ’ರ ಕುರಿತು ಮಹಾಪ್ರಬಂಧ ರಚಿಸಿರುವ ನಗರ ಪೊಲೀಸ್‌ ಆಯುಕ್ತ ಡಾ.ಅಜಯ್‌ಕುಮಾರ್‌ ಸಿಂಗ್‌ ಅವರಿಗೆ ‘ವಚನ ಸಾಹಿತ್ಯ ಶ್ರೀ’ ಪ್ರಶಸ್ತಿ ಲಭಿಸಿದೆ.
  • (ದಟ್ಸ್‌ ಕನ್ನಡ ವಾರ್ತೆ)

    ಮುಖಪುಟ / ವಾರ್ತೆಗಳು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more