• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಸಿಸಿ ಮ್ಯಾಚ್‌ ರೆಫ್ರಿಯಾಗಿ ಜಾವಗಲ್‌ ಶ್ರೀನಾಥ್‌ ಆಯ್ಕೆ

By Staff
|

ಐಸಿಸಿ ಮ್ಯಾಚ್‌ ರೆಫ್ರಿಯಾಗಿ ಜಾವಗಲ್‌ ಶ್ರೀನಾಥ್‌ ಆಯ್ಕೆ

ಕನ್ನಡಿಗನಿಗೆ ಸಂದ ಅಂತಾರಾಷ್ಟ್ರೀಯ ಗೌರವ, ಲಾಯ್ಡ್‌-ಬಾರ್ಡರ್‌ರೊಂದಿಗೆ ಕಾರ್ಯ ನಿರ್ವಹಣೆ

ನವದೆಹಲಿ : ಭಾರತದ ಮಾಜಿ ವೇಗದ ಬೌಲರ್‌, ಕನ್ನಡಿಗ ಜಾವಗಲ್‌ ಶ್ರೀನಾಥ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ)ನ ಮ್ಯಾಚ್‌ ರೆಫ್ರಿಯಾಗಿ ಆಯ್ಕೆಯಾಗಿದ್ದಾರೆ.

ಶ್ರೀನಾಥ್‌ ಜೊತೆ ದಿಲೀಪ್‌ ವೆಂಗ್‌ಸರ್ಕಾರ್‌, ರಾಬಿನ್‌ಸಿಂಗ್‌, ಕಿರಣ್‌ ಮೋರೆ ಮತ್ತು ಶಿವಲಾಲ್‌ ಯಾದವ್‌ ಅವರ ಹೆಸರುಗಳನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಸೂಚಿಸಿತ್ತು.

ಶ್ರೀನಾಥ್‌ ಅವರು ಎರಡನೇ ಹಂತದ ಅರೆಕಾಲಿಕ ರೆಫ್ರಿಯಾಗಿ ಆಯ್ಕೆಯಾಗಿದ್ದು, ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ಕ್ಲೈವ್‌ ಲಾಯ್ಡ್‌ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್‌ ಬಾರ್ಡರ್‌ ಅವರೊಂದಿಗೆ ಕಾರ್ಯ ನಿರ್ವಹಿಸುವರು.

ನಿವೃತ್ತಿ ನಂತರ ಇತ್ತೀಚೆಗೆ ಖಾಸಗಿ ದೂರದರ್ಶನ ವಾಹಿನಿಯಾಂದರ ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡುತ್ತಿದ್ದ ಅವರು, ಒಟ್ಟು 67 ಟೆಸ್ಟ್‌ ಪಂದ್ಯಗಳಿಂದ 236(ಸರಾಸರಿ 30.49) ವಿಕೆಟ್‌ ಉರುಳಿಸಿದ್ದಾರೆ. ಅಲ್ಲದೆ 229 ಏಕದಿನ ಪಂದ್ಯಗಳಲ್ಲಿ ಅವರು ಪಡೆದಿರುವ ಒಟ್ಟು ವಿಕೆಟ್‌ಗಳ ಸಂಖ್ಯೆ 315(ಸರಾಸರಿ 28.08).

ಶ್ರೀನಾಥ್‌ ಪ್ರತಿಕ್ರಿಯೆ : ನನ್ನ ಕ್ರಿಕೆಟ್‌ ಜೀವನದ ಒಟ್ಟು ಅನುಭವವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಇದು ಸದವಕಾಶ. ಈ ಜವಾಬ್ದಾರಿ ನನ್ನಲ್ಲಿ ಹೆಮ್ಮೆ ಉಂಟುಮಾಡಿದೆ. ಯಾವುದೇ ವಿವಾದಗಳಿಗೆ ಅವಕಾಶ ಮಾಡಿಕೊಡದೆ ಕಾರ್ಯ ನಿರ್ವಹಿಸುವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more