ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ಸುರಕ್ಷತೆ ಮಾಹಿತಿ ನೀಡುವ ವೆಬ್‌ಸೈಟ್‌ ಆರಂಭ

By Staff
|
Google Oneindia Kannada News

ರಸ್ತೆ ಸುರಕ್ಷತೆ ಮಾಹಿತಿ ನೀಡುವ ವೆಬ್‌ಸೈಟ್‌ ಆರಂಭ
ಅಪಘಾತ ನಿಯಂತ್ರಿಸಲು ಮಾಹಿತಿ ಅಗತ್ಯ, ಶಿಬಿರ ನಡೆಸುವಂತೆ ಸಲಹೆ

ಬೆಂಗಳೂರು : ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡುವ www.testtraffic.org ಎಂಬ ವೆಬ್‌ಸೈಟ್‌ ಶನಿವಾರ ಆರಂಭಗೊಂಡಿದೆ.

ಹೆಚ್ಚುವರಿ ಪೊಲೀಸ್‌ ಆಯುಕ್ತ ಎಂ.ಎನ್‌.ರೆಡ್ಡಿ ವೆಬ್‌ಸೈಟ್‌ ಉದ್ಘಾಟಿಸಿದರು. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ. ಸಂಚಾರ ಇಲಾಖೆಯ ಈ ವೆಬ್‌ಸೈಟ್‌ನಿಂದ ಸಮಗ್ರ ಮಾಹಿತಿ ದೊರೆಯಲಿದೆ. ಅಲ್ಲದೆ ರಸ್ತೆ ಸುರಕ್ಷತೆ ಕುರಿತು ತಿಳಿವಳಿಕೆ ಮೂಡಿಸಲು ಶಿಬಿರಗಳನ್ನು ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಂಚಾರ ವಿಭಾಗದ ಇಂಜಿನೀಯರ್‌ ಹಾಗೂ ಸುರಕ್ಷತೆ ತರಬೇತುದಾರರ ಮುಖ್ಯಸ್ಥ ಎಂ.ಎನ್‌.ಶೇಷಾದ್ರಿ ಮಾತನಾಡಿ, ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದರಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸುರಕ್ಷತೆ ಬಗ್ಗೆ ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X