ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್‌ 22ರಿಂದ ‘ಟಿವಿ 9 ಕರ್ನಾಟಕ’ ಚಾನಲ್‌ ಪ್ರಾರಂಭ

By Staff
|
Google Oneindia Kannada News

ಜೂನ್‌ 22ರಿಂದ ‘ಟಿವಿ 9 ಕರ್ನಾಟಕ’ ಚಾನಲ್‌ ಪ್ರಾರಂಭ
ಹೊಸ ಸುದ್ದಿವಾಹಿನಿ ಆಗಮನ, ಕನ್ನಡ ವಿದ್ಯುನ್ಮಾನ ಮಾಧ್ಯಮದಲ್ಲಿ ಕ್ರಾಂತಿ

ಬೆಂಗಳೂರು : ಜೂನ್‌ 22ರಂದು ತೆಲುಗು ಸುದ್ದಿವಾಹಿನಿ(ನ್ಯೂಸ್‌ ಚಾನಲ್‌) ಟಿವಿ9 ಸಂಸ್ಥೆ ‘ಟಿವಿ9 ಕರ್ನಾಟಕ’ ಎಂಬ ನೂತನ ಕನ್ನಡ ಸುದ್ದಿವಾಹಿನಿಯನ್ನು ಆರಂಭಿಸಲಿದೆ.

ಟಿವಿ9 ಕರ್ನಾಟಕ ವ್ಯವಸ್ಥಾಪಕ ನಿರ್ದೇಶಕ ಎಸ್‌.ವಿ.ಎಲ್‌ ನಾರಾಯಣ್‌ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ, ಶುದ್ಧ ಕನ್ನಡ ಸೊಗಡಿನ ಈ ಚಾನಲ್‌, ಕರ್ನಾಟಕಕ್ಕೆ ಸಂಬಂಧಿಸಿದ ಸಮಗ್ರ ಸುದ್ದಿಗಳನ್ನು ಬಿತ್ತರಿಸಲಿದೆ ಎಂದರು.

ಸದ್ಯಕ್ಕೆ ನಗರ ಪ್ರದೇಶಗಳ ಯುವಜನರನ್ನು ತಲುಪುವ ಗುರಿ ಹೊಂದಲಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆ ನೀಡಲಾಗುವುದು. ಶ್ರೀನಿ ರಾಜು ಅವರ ‘ಐ-ಲ್ಯಾಬ್ಸ್‌ ಆ್ಯಂಡ್‌ ಅಸೋಸಿಯೇಟೆಡ್‌ ಫಂಡ್‌ ಆ್ಯಂಡ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌’ ಧನ ಸಹಾಯ ಮಾಡಲಿದೆ ಎಂದರು.

ಟಿವಿ9 ಕರ್ನಾಟಕ ಚಾನಲ್‌ ಕನ್ನಡ ವಿದ್ಯುನ್ಮಾನ ಮಾಧ್ಯಮದಲ್ಲಿ ಕ್ರಾಂತಿ ಉಂಟುಮಾಡಲಿದೆ. ಇದರ ಮೂಲಭೂತ ಸೌಲಭ್ಯಗಳಿಗಾಗಿ 20ಕೋಟಿ ರೂಪಾಯಿ ಬಂಡವಾಳ ಹೂಡಲಾಗುವುದು ಎಂದು ನಾರಾಯಣ್‌ ತಿಳಿಸಿದರು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X