ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿಯಲ್ಲಿ ಉತ್ಖನನ : ಪ್ರಾಚೀನ ಕಾಲದ ನಿಧಿ ಪತ್ತೆ

By Staff
|
Google Oneindia Kannada News

ಹಂಪಿಯಲ್ಲಿ ಉತ್ಖನನ : ಪ್ರಾಚೀನ ಕಾಲದ ನಿಧಿ ಪತ್ತೆ
ಚಿಕ್ಕ ಪೆಟ್ಟಿಗೆಯಲ್ಲಿ ಹವಳ-ಮುತ್ತು-ರತ್ನ, ಬೆಲೆ ಅಂದಾಜಿಲ್ಲ

ಹೊಸಪೇಟೆ : ಭಾರತೀಯ ಪುರಾತತ್ವ ಇಲಾಖೆ ಹಂಪಿಯಲ್ಲಿ ನಡೆಸುತ್ತಿರುವ ಉತ್ಖನನ ಸಂದರ್ಭದಲ್ಲಿ, ಪ್ರಾಚೀನ ಕಾಲದ ಮುತ್ತು ರತ್ನಗಳನ್ನೊಳಗೊಂಡ ನಿಧಿ ಪತ್ತೆಯಾಗಿದೆ.

ಅಚ್ಯುತರಾಯದೇವ ಮಂದಿರದ ಓಣಿಯ ಉತ್ಖನನ ಕಾರ್ಯ ನಡೆಯುತ್ತಿದ್ದಾಗ, ಈ ನಿಧಿ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕ ಪೆಟ್ಟಿಗೆಯಾಂದು ಪತ್ತೆಯಾಗಿದ್ದು, ಅದರಲ್ಲಿ ಹವಳ, ಮುತ್ತು, ರತ್ನ, ಬೆಳ್ಳಿ, ಬಂಗಾರ, ತಾಮ್ರದ ತಗಡು ಹಾಗೂ ಒಂದು ಬಟ್ಟೆಯ ತುಣುಕುಗಳು ಸಿಕ್ಕಿವೆ. ಬಟ್ಟೆ ಶಿಥಿಲಾವಸ್ಥೆಯಲ್ಲಿದ್ದು, ಕೆಲವು ಕೆಂಪು ಹರಳಿನ ಕಲ್ಲುಗಳೂ ದೊರೆತಿವೆ. ನಿಧಿಯ ಬೆಲೆ ಇನ್ನೂ ಅಂದಾಜು ಮಾಡಲಾಗಿಲ್ಲ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X