ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾ ಹತ್ಯೆ ಪ್ರಕರಣಕ್ಕೆ ತಿರುವು : ಅತ್ಯಾಚಾರ ನಿಜವೇ?

By Staff
|
Google Oneindia Kannada News

ಪ್ರತಿಭಾ ಹತ್ಯೆ ಪ್ರಕರಣಕ್ಕೆ ತಿರುವು : ಅತ್ಯಾಚಾರ ನಿಜವೇ?
ಡಿಎನ್‌ಎ ಪರೀಕ್ಷೆ ಮತ್ತು ಮಂಪರು ಪರೀಕ್ಷೆಯಲ್ಲಿ ವ್ಯತಿರಿಕ್ತ ಫಲಿತಾಂಶ

ಬೆಂಗಳೂರು : ನಗರವನ್ನು ತಲ್ಲಣಗೊಳಿಸಿದ್ದ ಕಾಲ್‌ಸೆಂಟರ್‌ ಉದ್ಯೋಗಿ ಪ್ರತಿಭಾ ಹತ್ಯೆಪ್ರಕರಣ ಹೊಸ ತಿರುವು ಪಡೆದಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಮೃತ ಪ್ರತಿಭಾಳ ಡಿಎನ್‌ಎ ಪರೀಕ್ಷೆ ನಡೆಸಿರುವ ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೊರಬಂದಿದೆ. ಅತ್ಯಾಚಾರ ನಡೆದಿರುವುದು ಡಿಎನ್‌ಎ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿಲ್ಲ. ಅಲ್ಲದೇ ಪ್ರತಿಭಾಳನ್ನು ಕೊಂದ ಆರೋಪಿ ಶಿವಕುಮಾರ್‌, ಅತ್ಯಾಚಾರದ ಸಂಗತಿಯನ್ನು ಮಂಪರು ಪರೀಕ್ಷೆಯಲ್ಲಿ ತಳ್ಳಿ ಹಾಕಿದ್ದಾನೆ. ಜೊತೆಗೆ ನಾನು ಅತ್ಯಾಚಾರವೆಸಗಿಲ್ಲ. ಅನಗತ್ಯವಾಗಿ ನನ್ನ ಮೇಲೆ ಆರೋಪ ಹೊರಿಸಲಾಗಿದೆ ಎಂದು ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾನೆ.

ಪ್ರತಿಕ್ರಿಯೆ : ಕೊಲೆಯನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಅತ್ಯಾಚಾರದ ಬಗೆಗೆ ತನಿಖೆ ಮುಂದುವರೆಸುವುದಾಗಿ ನಗರ ಪೊಲೀಸ್‌ ಆಯುಕ್ತ ಡಾ.ಅಜಯಕುಮಾರ್‌ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X