ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುಕಟ್ಟೆಯಲ್ಲಿ ಮಾವಿನ ಕಾರುಬಾರು...ಬಲು ಜೋರು!

By Staff
|
Google Oneindia Kannada News

ಮಾರುಕಟ್ಟೆಯಲ್ಲಿ ಮಾವಿನ ಕಾರುಬಾರು...ಬಲು ಜೋರು!
ತೋಟಗಾರಿಕೆ ಇಲಾಖೆಯಿಂದ ಮೇ ತಿಂಗಳಲ್ಲಿ ಮಾವಿನಣ್ಣಿನ ಮೇಳ

ಬೆಂಗಳೂರು : ಬಿಸಿಲ ಬೇಗೆಯಾಂದಿಗೆ, ನಾಲಿಗೆ ತಣಿಸುವ ಮಾವು ಸಹಾ ನಗರದ ಮಾರುಕಟ್ಟೆಗೆ ಬಿಜಯಂಗೈದಿದೆ! ಮಾವಿನಹಣ್ಣು ಪ್ರಿಯರಿಗೆ ಇದು ಸಕಾಲ.

ಬೇಕಾದ ಹಣ್ಣನ್ನು, ಅಗ್ಗದ ದರದಲ್ಲಿ ಕೊಳ್ಳಲು ಗ್ರಾಹಕರು ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದ್ದಾರೆ. ಆಲ್ಪೋನ್ಸೊ ಬಾದಾಮಿ, ರಸಪುರಿ, ಸಿಂಧೂರ, ಬಂಗನಪಲ್ಲಿ, ಸೇರಿದಂತೆ ವಿವಿಧ ತಳಿಯ ಹಣ್ಣುಗಳು ಮಾರುಕಟ್ಟೆಯಲ್ಲಿ ಕಣ್ಮನ ಸೆಳೆಯುತ್ತಿವೆ.

ಮಾವಿನ ವಿವಿಧ ತಳಿಯ ಹಣ್ಣುಗಳನ್ನು ನಗರದ ಹೊಸೂರು ರಸ್ತೆಯ ಸಿಂಗನೇನ ಅಗ್ರಹಾರದ ಸಗಟು ಮಾರುಕಟ್ಟೆಯಲ್ಲಿ ಇಳಿಸಲಾಗುತ್ತಿದೆ. ಏ.20ರ ನಂತರ ಈ ಮಾರುಕಟ್ಟೆ ಜಕ್ಕೂರು ಬಳಿಯ ಬ್ಯಾಟರಾಯನಪುರಕ್ಕೆ ಸ್ಥಳಾಂತರವಾಗಲಿದೆ.

ಸಕಾಲಕ್ಕೆ ಮಳೆ ಬಾರದ ಕಾರಣ ಶೇ.40ರಷ್ಟು ಮಾವಿನ ಫಸಲು ರೈತರ ಕೈಗೆ ಲಭ್ಯವಾಗಿದೆ. ಒಳ್ಳೆ ಹಣ್ಣುಗಳ ಸಂಖ್ಯೆ ಸಹಾ ಕಡಿಮೆ. ಹೀಗಾಗಿ ಈ ವರ್ಷ ಅಂತಹ ದರ ಸಮರವಿಲ್ಲ ಎನ್ನಲಾಗಿದೆ.

ಈ ಮಧ್ಯೆ, ಮುಂದಿನ ಮೇ ತಿಂಗಳ ಎರಡನೇ ವಾರದಲ್ಲಿ ತೋಟಗಾರಿಕೆ ಇಲಾಖೆ, ಲಾಲ್‌ಬಾಗ್‌ನಲ್ಲಿ ವಿವಿಧ ತಳಿ ಮಾವಿನ ಹಣ್ಣುಗಳ ಮೇಳ ಏರ್ಪಡಿಸಲು ನಿರ್ಧರಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X