ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ರಾತ್ರಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ

By Staff
|
Google Oneindia Kannada News

ಗುರುವಾರ ರಾತ್ರಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ
ದ್ರೌಪತಿ ಪಾತಿವ್ರತ್ಯ ಬಿಂಬಿಸುವ ಕರಗ ಮಹೋತ್ಸವಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನ ಸಜ್ಜು

ಬೆಂಗಳೂರು : ಏ.13ರ ಮಧ್ಯರಾತ್ರಿ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಕರಗ ಮಹೋತ್ಸವ ಜರುಗಲಿದೆ.

ನಗರದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಕರಗದ ಹಿನ್ನೆಲೆ ಕಳೆ ಬಂದಿದೆ. ಸುಮಾರು 800ವರ್ಷದಷ್ಟು ಹಳೆಯದಾದ ಈ ಉತ್ಸವ, ವರ್ಷದಿಂದ ವರ್ಷಕ್ಕೆ ಜನಾಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ಕಳೆದ ಹತ್ತುವರ್ಷದಿಂದ ಈ ಹೂವಿನ ಕರಗ ಹೊರುತ್ತಿದ್ದ ಅಭಿಮನ್ಯು, ಈ ಸಲ ತಮ್ಮ ಕಾಯಕವನ್ನು ಜ್ಞಾನೇಂದ್ರ(28)ಅವರಿಗೆ ಒಪ್ಪಿಸಿದ್ದಾರೆ.

ಏ.5ರಿಂದ ಕರಗ ಮಹೋತ್ಸವ ಆರಂಭಗೊಂಡಿದ್ದು, ಏ.13ರ ರಾತ್ರಿ ಮಹತ್ವದ ಉತ್ಸವ ನೆರವೇರಲಿದೆ. ವಸ್ತ್ರಾಪಹರಣದ ನಂತರವೂ ದ್ರೌಪತಿ ಪವಿತ್ರವಾಗಿದ್ದಾಳೆ ಎಂಬುದನ್ನು ಹಬ್ಬ ಸಾಂಕೇತಿಕವಾಗಿ ಸೂಚಿಸುತ್ತದೆ ಎಂದು ಧರ್ಮರಾಯ ಸ್ವಾಮಿ ದೇವಸ್ಥಾನದ ಟಿ.ಎಮ್‌.ಮನೋಹರ್‌ ಅಭಿಪ್ರಾಯಪಡುತ್ತಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X