ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಲ್ಮಿಯಲ್ಲೇ ಹೈಕೋರ್ಟ್‌ ಪೀಠ : ಎಚ್‌.ಡಿ.ಕುಮಾರಸ್ವಾಮಿ

By Staff
|
Google Oneindia Kannada News

ವಾಲ್ಮಿಯಲ್ಲೇ ಹೈಕೋರ್ಟ್‌ ಪೀಠ : ಎಚ್‌.ಡಿ.ಕುಮಾರಸ್ವಾಮಿ
ಬದಲಾಗದ ನಿಲುವು, ಜುಲೈ 18ರಿಂದ ಕಾಮಗಾರಿ ಆರಂಭ

ಧಾರವಾಡ : ಇಲ್ಲಿಗೆ ಸಮೀಪದ ವಾಲ್ಮಿಯಲ್ಲಿಯೇ ಹೈಕೋರ್ಟ್‌ ಸಂಚಾರಿ ಪೀಠದ ಕಟ್ಟಡ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಈ ಕುರಿತು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಜುಲೈ 10ರಿಂದ ನಿರ್ಮಾಣ ಕಾರ್ಯ ಆರಂಭವಾಗಲಿದೆ. 18 ತಿಂಗಳ ಅವಧಿಯಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲೇ ವಾಲ್ಮಿ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿತ್ತು. ಹಾಗಾಗಿ ಆ ಸ್ಥಳದಲ್ಲಿ ಕಟ್ಟಡ ನಿರ್ಮಿಸುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕುರಿತು ಅನಗತ್ಯ ವಿವಾದ ಎಬ್ಬಿಸದೆ, ಕಾರ್ಯ ಸುಗಮಗೊಳಿಬೇಕು ಎಂದು ಅವರು ಹುಬ್ಬಳ್ಳಿ ವಕೀಲರಲ್ಲಿ ಮನವಿ ಮಾಡಿದರು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X