• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಟಿ : 2 ಸರ್ಕಾರಿ ಶಾಲೆಗಳಿಗೆ ರಾಷ್ಟ್ರಮಟ್ಟದ ಪುರಸ್ಕಾರ

By Staff
|

ಐಟಿ : 2 ಸರ್ಕಾರಿ ಶಾಲೆಗಳಿಗೆ ರಾಷ್ಟ್ರಮಟ್ಟದ ಪುರಸ್ಕಾರ

ಇಂಟೆಲ್‌ ಸಂಸ್ಥೆಯ ಸಹಯೋಗ, ಚಂಡೀಗಢದಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು : ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಇಂಟೆಲ್‌ ನೀಡುವ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ರಾಜ್ಯದ ಎರಡು ಸರ್ಕಾರಿ ಶಾಲೆಗಳು ಪಡೆದುಕೊಂಡಿವೆ.

ಉಡುಪಿ ಜಿಲ್ಲೆ ವಳಕಾಡು ಎಂಬ ಊರಿನ ಸರ್ಕಾರಿ ಪ್ರೌಢಶಾಲೆ ಹಾಗೂ ಬೆಂಗಳೂರು ನಗರದ ಪೀಣ್ಯದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಈ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿವೆ. ಎರಡೂ ಶಾಲೆಗಳು ಕ್ರಮವಾಗಿ 75,000 ಹಾಗೂ 37,000 ರೂಪಾಯಿ ನಗದು ಬಹುಮಾನ ಪಡೆದಿವೆ. ಶಿಕ್ಷಣದಲ್ಲಿ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಂಡಿರುವ ಕಾರಣ ಈ ಪ್ರಶಸ್ತಿ ನೀಡಲಾಗುತ್ತಿದೆ.

ಏಪ್ರಿಲ್‌ 4ರಂದು ಚಂಡೀಗಢದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ವಳಕಾಡು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅಶೋಕ್‌ ಕಾಮತ್‌ ಹಾಗೂ ಪೀಣ್ಯ ಪದವಿಪೂರ್ವ ಕಾಲೇಜು ಉಪ-ಪ್ರಾಚಾರ್ಯೆ ಬಿ.ಜಿ.ಮಂಜುಳಾ ಪ್ರಶಸ್ತಿ ಸ್ವೀಕರಿಸಿದರು. ಪಂಜಾಬ್‌ ಗವರ್ನರ್‌ ಜನರಲ್‌ ಎಸ್‌.ಎಫ್‌.ರೋಡ್ರಿಗ್ಸ್‌ ಪ್ರಶಸ್ತಿ ಪ್ರದಾನ ಮಾಡಿದರು.

ವಳಕಾಡು ಸರ್ಕಾರಿ ಪ್ರೌಢಶಾಲೆ, ದಾನಿಯಾಬ್ಬರ ನೆರವಿನಿಂದ ಮಾಹಿತಿ-ತಂತ್ರಜ್ಞಾನ ಆಧಾರಿತ ಮೂಲಸೌಕರ್ಯ ಪಡೆದಿದೆ. ವ್ಯವಸ್ಥಿತ ಗ್ರಂಥಾಲಯ ಹಾಗೂ ದೃಶ್ಯ-ಶ್ರವ್ಯ ವ್ಯವಸ್ಥೆ ಹೊಂದಿದೆ. ಇದಕ್ಕೆ 1.5ಕೋಟಿ ರೂಪಾಯಿ ವೆಚ್ಚವಾಗಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಪೀಣ್ಯ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯ ಕಲ್ಪಿಸಿದೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more