ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟ್‌ ಸುವರ್ಣ ಜಯಂತಿ : ‘ನ್ಯಾಯಕ್ಕಾಗಿ ಓಟ’

By Staff
|
Google Oneindia Kannada News

ಹೈಕೋರ್ಟ್‌ ಸುವರ್ಣ ಜಯಂತಿ : ‘ನ್ಯಾಯಕ್ಕಾಗಿ ಓಟ’
ಶನಿವಾರ ಬೆಳಗ್ಗೆ ಹೈಕೋರ್ಟ್‌ನಿಂದ ಎಂ.ಜಿ.ರಸ್ತೆ ತನಕ ನ್ಯಾಯದ ಓಟ

ಬೆಂಗಳೂರು : 1956ರಲ್ಲಿ ಆರಂಭಗೊಂಡ ರಾಜ್ಯ ಹೈಕೋರ್ಟ್‌ಗೆ ಈಗ ಐವತ್ತರ ಪ್ರಾಯ. ಸುವರ್ಣ ಮಹೋತ್ಸವದ ಸಂಭ್ರಮ.

ಕೇವಲ ಮೂವರು ನ್ಯಾಯಮೂರ್ತಿಗಳಿಂದ 36 ನ್ಯಾಯಮೂರ್ತಿಗಳವರೆಗೆ, 925 ಪ್ರಕರಣಗಳಿಂದ ಲಕ್ಷಾಂತರ ಪ್ರಕರಣಗಳವರೆಗೆ ಹೈಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ನ್ಯಾಯದ ಘನತೆಯನ್ನು ಜಗತ್ತಿಗೆ ಸಾರುತ್ತಿರುವ ರಾಜ್ಯ ಹೈಕೋರ್ಟ್‌ನ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳು, ಏ.7ರಿಂದ ನ.4ರವರೆಗೆ ನಡೆಯಲಿವೆ.

ಓಟ : ಸ್ವರ್ಣ ಜಯಂತಿ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ನ್ಯಾಯವನ್ನು ಎತ್ತಿ ಹಿಡಿಯಲು ‘ನ್ಯಾಯಕ್ಕಾಗಿ ಓಟ’ ಕಾರ್ಯಕ್ರಮವನ್ನು, ಶನಿವಾರ ಬೆಳಗ್ಗೆ 7.30ಕ್ಕೆ ಆಯೋಜಿಸಲಾಗಿದೆ.

ಹೈಕೋರ್ಟ್‌ನಿಂದ ಮಹಾತ್ಮಗಾಂಧಿ ರಸ್ತೆ ತನಕ ಓಟದ ಕಾರ್ಯಕ್ರಮವಿದೆ. ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಸೇರಿದಂತೆ ಅನೇಕರು ಓಟದಲ್ಲಿ ಭಾಗವಹಿಸುವರು.

ನ್ಯಾಯದ ಸಂದೇಶ ಮುಟ್ಟಿಸುವ ಆಶಯ ಹೊಂದಿರುವ ಓಟದಲ್ಲಿ ಕ್ರೀಡಾಪಟುಗಳಾದ ವೆಂಕಟೇಶ್‌ ಪ್ರಸಾದ್‌, ಸದಾನಂದ ವಿಶ್ವನಾಥ್‌, ಅಶ್ವಿನಿ ನಾಚಪ್ಪ ಮತ್ತಿತರರು ಪಾಲ್ಗೊಳ್ಳುವರು. ಸಾರ್ವಜನಿಕರಿಗೂ ಮುಕ್ತ ಅವಕಾಶ ಇದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X