• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಪ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆಗೆ ರಾಜ್ಯ ಸರ್ಕಾರ ಸನ್ಮಾನ

By Staff
|

ಟಾಪ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆಗೆ ರಾಜ್ಯ ಸರ್ಕಾರ ಸನ್ಮಾನ

ಕ್ರೀಡಾ ಅಕಾಡೆಮಿ ಸ್ಥಾಪಿಸುವ ಕನಸು, ಇನ್ನೊಂದು ವಿಶ್ವಕಪ್‌ನಲ್ಲಿ ಆಡುವ ಆಸೆ

ಬೆಂಗಳೂರು : ಟೆಸ್ಟ್‌ ಕ್ರಿಕೆಟ್‌ನಲ್ಲಿ 500ಕ್ಕೂ ಅಧಿಕ ವಿಕೆಟ್‌ ಗಳಿಸಿ ಖ್ಯಾತಿ ಮೆರೆದಿರುವ ಕನ್ನಡಿಗ ಅನಿಲ್‌ ಕುಂಬ್ಳೆ ಅವರನ್ನು ಬುಧವಾರ ರಾಜ್ಯ ಸರ್ಕಾರ ಸನ್ಮಾನಿಸಿತು.

ಸರ್ಕಾರದ ಪರವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸನ್ಮಾನಿಸಿ ಗೌರವಿಸಿದರು. ಅನಿಲ್‌ ಕುಂಬ್ಳೆ ಅವರಿಗೆ ಮೈಸೂರು ಪೇಟಾ ತೊಡಿಸುತ್ತಿದ್ದಂತೆ ಭಾರೀ ಕರತಾಡನ. ಆನಂತರ ಬೆಳ್ಳಿಯ ಸ್ಮರಣ ಫಲಕ ಹಾಗೂ ಐದು ಲಕ್ಷ ರೂಪಾಯಿ ಚೆಕ್‌ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಕನ್ನಡದಲ್ಲೇ ಮಾತನಾಡಿದ ಕುಂಬ್ಳೆ, ನಾನು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಆದರೆ ನಮ್ಮ ರಾಜ್ಯ ಸರ್ಕಾರ ನೀಡುತ್ತಿರುವ ಸನ್ಮಾನ ವಿಶೇಷ ಎನಿಸುತ್ತಿದೆ. ಕ್ರಿಕೆಟ್‌ ಸೇರಿದಂತೆ ಎಲ್ಲ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಬೇಕೆಂಬ ಕನಸು ಬಹುದಿನಗಳಿಂದಲೂ ನನ್ನಲ್ಲಿದೆ. ಅದು ನನಸಾಗುವ ಸಮಯ ಈ ಬಂದಿದೆ ಎಂದು ಎನಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಜಾಗ ನೀಡಬೇಕು ಎಂದು ಮನವಿ ಮಾಡಿದರು.

ಅನಿಲ್‌ ಕುಂಬ್ಳೆಯವರು ವಿಶ್ವದ ಎಲ್ಲ ಬೌಲರುಗಳನ್ನು ಮೀರಿ ನಿಲ್ಲಬೇಕು. ಶೇನ್‌ ವಾರ್ನ್‌, ಮುತ್ತಯ್ಯ ಮುರಳೀಧರನ್‌ ಅವರಿಗಿಂತ ಹೆಚ್ಚು ವಿಕೆಟ್‌ ಪಡೆಯಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾರೈಸಿದರು.

ಕುಂಬ್ಳೆ ಮುಂಬರುವ ವಿಶ್ವಕಪ್‌ನಲ್ಲಿ ಆಡುವ ಆಸೆಯನ್ನೂ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ನಡೆದ ಸಮಾರಂಭವನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಯೋಜಿಸಿತ್ತು. ಮಾಜಿ ಮುಖ್ಯಮಂತ್ರಿಧರ್ಮಸಿಂಗ್‌, ಅನಿಲ್‌ ಕುಂಬ್ಳೆ ತಾಯಿ ಸರೋಜಾ, ಅಣ್ಣ ದಿನೇಶ್‌ ಹಾಗೂ ಪತ್ನಿ ಚೇತನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರಂಗೆ ಕಾಯುವ ಶಿಕ್ಷೆ...! : ಸಾಮಾನ್ಯವಾಗಿ ಭಾರತೀಯ ಕಾರ್ಯಕ್ರಮಗಳು ಅದರಲ್ಲೂ ಸರ್ಕಾರಿ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ನಡೆಯುವುದಿಲ್ಲ ಎಂಬ ಪ್ರತೀತಿ ಇದೆ. ಇದು ಸತ್ಯವೆಂದು ಮತ್ತೊಮ್ಮೆ ಸಾಬೀತಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಸಮಯೋಚಿತವಾಗಿ ಸ್ಥಳಕ್ಕೆ ಆಗಮಿಸಿದರು. ಆದರೆ, ಆ ಸಮಯದಲ್ಲಿ ಯಾರೂ ಬರದಿದ್ದ ಕಾರಣ, ಧರ್ಮಸಿಂಗ್‌ ಅವರು ಕಾಯುವ ಶಿಕ್ಷೆ ಅನುಭವಿಸಬೇಕಾಯಿತು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more