• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಹಗನ್ನಡಿ : ಇಂಗ್ಲಿಷ್‌-ಹಿಂದಿಯ ವೈಭವೀಕರಣ ನಿಲ್ಲಲಿ...

By Staff
|

ಸಿಂಹಗನ್ನಡಿ : ಇಂಗ್ಲಿಷ್‌-ಹಿಂದಿಯ ವೈಭವೀಕರಣ ನಿಲ್ಲಲಿ...

ಪಂಪ ಬರೆಯುತ್ತಿದ್ದಾಗ ಛಾಸರ್‌ ಹುಟ್ಟಿರಲೇ ಇಲ್ಲ, ಅನ್ಯಭಾಷಾ ವ್ಯಾಮೋಹ ಅಂತ್ಯವಾಗಲಿ -ರಾಜ್‌ಕುಮಾರ್‌.

ಬೆಂಗಳೂರು : ಹಿಂದಿ ಹಾಗೂ ಇಂಗ್ಲಿಷಿನ ವೈಭವೀಕರಣ ಎಲ್ಲೆಡೆ ನಡೆದಿದೆ. ಇದರಿಂದ ನಾವು ಮುಕ್ತರಾಗಿ, ಈ ನೆಲದ ಸಾರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸವಿಗನ್ನಡ ಬಳಗದ ಅಧ್ಯಕ್ಷ ಕೆ.ರಾಜ್‌ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಅವರು ಇತ್ತೀಚೆಗೆ ಬನವಾಸಿ ಬಳಗ ಏರ್ಪಡಿಸಿದ್ದ ಸಿಂಹಗನ್ನಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಹಿಂದಿ ರಾಷ್ಟ್ರ ಭಾಷೆಯಲ್ಲ, ಅದು ಕೇವಲ ಕೇಂದ್ರ ಸರ್ಕಾರದ ಅಧಿಕೃತ ಭಾಷೆ. ಅದೇ ರೀತಿ ಇಂಗ್ಲಿಷ್‌ ಅಂತಾರಾಷ್ಟ್ರೀಯ ಭಾಷೆಯೂ ಅಲ್ಲ. ಅಮೆರಿಕಾದಲ್ಲೂ ಇಂಗ್ಲಿಷ್‌ ರಾಷ್ಟ್ರೀಯ ಭಾಷೆಯೆಂದು ಪರಿಗಣಿತವಾಗಿಲ್ಲ ಎಂದು ವಿವರಿಸಿದರು.

ಭಾರತೀಯ ಸಮಾಜದಲ್ಲಿ ಅತ್ಯಂತ ಮಹತ್ವದ ವ್ಯಕ್ತಿಗಳಲ್ಲೊಬ್ಬರಾದ ಆಚಾರ್ಯ ವಿನೋಬಾ ಭಾವೆ, ಕನ್ನಡ ವಿಶ್ವದ ಲಿಪಿಗಳ ರಾಣಿ ಎಂದು ಹೇಳಿದ್ದಾರೆ. ಅಲ್ಲದೆ ವಿಶ್ವದ ಸರ್ವ ಲಿಪಿಗಳ ಪ್ರದರ್ಶನಗಳ ಪೈಕಿ ಕನ್ನಡ ನಿಸ್ಸಂದೇಹ-ನಿಸ್ಸಂದಿಗ್ಧ ಲಿಪಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡವು ಜಗತ್ತಿನಲ್ಲೇ ಅತ್ಯಂತ ಸ್ವೀಕರಣ ಸಾಮರ್ಥ್ಯವಿರುವ ಭಾಷೆಯೂ ಹೌದು ಎಂದು ರಾಜ್‌ಕುಮಾರ್‌ ಹೇಳಿದರು.

ಕನ್ನಡದ ಮುಂದೆ ಇಂಗ್ಲಿಷ್‌ ಕುಬ್ಜ : ಕನ್ನಡ ಸಂಸ್ಕೃತಿಗೆ ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಶೌರ್ಯ-ಧೈರ್ಯಗಳಿಗೆ ಹಲವು ಶತಮಾನಗಳಿಂದಲೂ ಕರ್ನಾಟಕ ಹೆಸರುವಾಸಿ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದಿರುವ ಮಹಾಪುರುಷರು ಇಲ್ಲಿ ಅವತರಿಸಿದ್ದಾರೆ. ಪಂಪ ಕಾವ್ಯ ಬರೆಯುತ್ತಿದ್ದಾಗ ಇಂಗ್ಲಿಷ್‌ನ ಛಾಸರ್‌ ಇನ್ನೂ ಹುಟ್ಟಿರಲೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಭಾಷೆಗೂ ಬದುಕಿಗೂ ಅವಿನಾಭವ ಸಂಬಂಧವಿದೆ. ಈ ನಿಟ್ಟಿನಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಎಲ್ಲವೂ ಒಂದೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಭಾಷೆ ಸಂಸ್ಕೃತಿಯ ವಾಹಕ ಶಕ್ತಿ. ನಮ್ಮ ಭಾಷೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ತತ್ವಜ್ಞಾನ ಸೇರಿದಂತೆ ಎಲ್ಲವನ್ನೂ ಬೋಧಿಸಲು ಹಾಗೂ ಕಲಿಯಲು ಸಾಧ್ಯವಿದೆ. ಅಂತಹ ಉತ್ಕೃಷ್ಟತೆ ಕನ್ನಡಕ್ಕಿದೆ ಎಂದರು.

ನಮ್ಮ ಬದುಕು ಸಮೃದ್ಧವಾಗಬೇಕಾದರೆ ನಮ್ಮ ಭಾಷೆ ಹಾಸುಹೊಕ್ಕಾಗಬೇಕು. ಅನ್ಯಭಾಷೆಗಳ ವ್ಯಾಮೋಹದಲ್ಲಿ ಕುರುಡಾಗಿರುವ ನಾವು ನಮ್ಮ ಭಾಷೆಯತ್ತ ತಿರುಗಬೇಕಿದೆ ಎಂದು ಆಗ್ರಹಿಸಿದರು.

ಬನವಾಸಿ ಬಳಗದ ಆನಂದ್‌ ಸ್ವಾಗತಿಸಿ ವಂದಿಸಿದರು. ಬನವಾಸಿ ಬಳಗದ ಬಾ.ರಾ.ಕಿರಣ, ಗಣೇಶ್‌, ಪ್ರವೀಣ್‌, ಭರತ್‌, ಅನಂತ ಜೋಯಿಸ, ರಾಘವೇಂದ್ರ, ಜನಾರ್ದನ ಚೆನ್ನಗಿರಿ, ಅಶೋಕ ಭಟ್ಟ, ಚಿನ್ನಯ್ಯ ಮೊದಲಾದವರು ಉಪಸ್ಥಿತರಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more