ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿಮಾನಯಾನ ನಕ್ಷೆ ಬದಲಿಸುವೆ : ವಿಜಯ್‌ ಮಲ್ಯ

By Staff
|
Google Oneindia Kannada News

ಭಾರತದ ವಿಮಾನಯಾನ ನಕ್ಷೆ ಬದಲಿಸುವೆ : ವಿಜಯ್‌ ಮಲ್ಯ
ಕಡಿಮೆ ದರದಲ್ಲಿ ಹೆಚ್ಚು ಸೌಲಭ್ಯ, ಏಪ್ರಿಲ್‌ 8ರಿಂದ ಮೊದಲ ಎಟಿಆರ್‌ ವಿಮಾನ ಹಾರಾಟ

ಬೆಂಗಳೂರು : ಕಿಂಗ್‌ಫಿಶರ್‌ ಏರ್‌ ಲೈನ್ಸ್‌ ದೇಶದ ವಿಮಾನಯಾನ ನಕ್ಷೆಯನ್ನೇ ಬದಲಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ-ಉದ್ಯಮಿ ವಿಜಯ್‌ ಮಲ್ಯ ಹೇಳಿದ್ದಾರೆ.

ಗುರುವಾರ ಏರ್‌ ಬಸ್‌ ಕಚೇರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಭಾರತದ ಉಳಿದ ಭಾಗಗಳಿಗಿಂತ ದಕ್ಷಿಣ ಭಾಗ ಕ್ಷಿಪ್ರವಾಗಿ ಆರ್ಥಿಕ ಬೆಳವಣಿಗೆ ಹೊಂದುತ್ತಿದೆ. ಬೆಂಗಳೂರಂತೂ ಇಡೀ ದೇಶದಲ್ಲೇ ಅಸಾಧಾರಣ ಆರ್ಥಿಕ ಪ್ರಗತಿಗೆ ನಾಂದಿ ಹಾಡಿದೆ. ಈಗ ದೇಶದಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ವಿಮಾನಯಾನ ಸೌಲಭ್ಯ ವಿಸ್ತಾರಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ಐದು ವರ್ಷಗಳಲ್ಲಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಂಸ್ಥೆ, 42ರಿಂದ 72 ಆಸನಗಳುಳ್ಳ 35 ಎಟಿಆರ್‌(ಏವಿಯನ್‌ ಡಿ ಟ್ರಾನ್ಸ್‌ಪೋರ್ಟ್‌ ರೀಜನಲ್‌) ವಿಮಾನ ಖರೀದಿಸಲಿದೆ. ಆ ಮೂಲಕ ದೇಶದ ವಿಮಾನಯಾನ ನಕ್ಷೆಯೇ ಬದಲಾಗಲಿದೆ. ಬೆಂಗಳೂರು-ಹೈದರಾಬಾದ್‌ ನಡುವೆ ಮೊದಲ ಎಟಿಆರ್‌ ವಿಮಾನ ಹಾರಾಟ ಏಪ್ರಿಲ್‌ 8ರಿಂದ ಆರಂಭವಾಗಲಿದೆ ಎಂದು ಅವರು ವಿವರಿಸಿದರು.

ಕಿಂಗ್‌ಫಿಶರ್‌ ಏರ್‌ಲೈನ್ಸ್‌ ದಕ್ಷಿಣ ಭಾರತದಲ್ಲಿ ಏಕಸ್ವಾಮ್ಯ ಸಾಧಿಸಲಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚು ಸೌಲಭ್ಯ ಒದಗಿಸಲಿದೆ. ನಾಗರಿಕ ವಿಮಾನಯಾನ ಸೌಲಭ್ಯ ಇಲ್ಲದಿರುವ ಚಿಕ್ಕ ನಗರಗಳಿಗೂ ಈ ಸೇವೆ ಲಭ್ಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X