ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.10ರಷ್ಟು ಸಂಬಳ ಹೆಚ್ಚಿಸಿದ್ದಕ್ಕೆ ಸರ್ಕಾರಿ ನೌಕರರ ಹರ್ಷ

By Staff
|
Google Oneindia Kannada News

ಶೇ.10ರಷ್ಟು ಸಂಬಳ ಹೆಚ್ಚಿಸಿದ್ದಕ್ಕೆ ಸರ್ಕಾರಿ ನೌಕರರ ಹರ್ಷ
ಶಿಕ್ಷಕರ ವೇತನಕ್ಕೆ ಹೆಚ್ಚುವರಿಯಾಗಿ ಇನ್ನೂ 200 ರೂ. ಸೇರ್ಪಡೆ

ಬೆಂಗಳೂರು : ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸ್ವಾಗತಿಸಿದೆ.

ಯುಗಾದಿ ಕೊಡುಗೆ ರೂಪದಲ್ಲಿ ನೌಕರರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಐದನೇ ವೇತನ ಆಯೋಗದ ಮಧ್ಯಂತರ ಪರಿಹಾರವಾಗಿ ಈ ಹೆಚ್ಚಳ ಮಾಡಲಾಗಿದ್ದು, ಏಪ್ರಿಲ್‌ 1ರಿಂದ ಇದು ಅನ್ವಯಿಸಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ತಾರತಮ್ಯ ದೂರಮಾಡಲು, ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ತರಗತಿಗಳ ಶಿಕ್ಷಕರ ವೇತನದಲ್ಲಿ ಮಾಸಿಕ 200 ರೂ. ಹೆಚ್ಚಳವನ್ನು ಸರ್ಕಾರ ಘೋಷಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X