ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಹೆಚ್ಚು ಸಮಯ ಉಪನ್ಯಾಸ : ಡಾ.ಅಣ್ಣಯ್ಯ ಗಿನ್ನೆಸ್‌ ದಾಖಲೆ

By Staff
|
Google Oneindia Kannada News

ಅತಿ ಹೆಚ್ಚು ಸಮಯ ಉಪನ್ಯಾಸ : ಡಾ.ಅಣ್ಣಯ್ಯ ಗಿನ್ನೆಸ್‌ ದಾಖಲೆ
ನಾರಾಯಣ ಶಿವಶಂಕರ್‌, ಮೂಸಾವಾರಿkು ದಾಖಲೆ ಧೂಳೀಪಟ.

ಮಂಗಳೂರು : ಸತತ 98 ಗಂಟೆ 33 ಸೆಕೆಂಡುಗಳ ಕಾಲ ಸುದೀರ್ಘ ಉಪನ್ಯಾಸ ನೀಡುವ ಮೂಲಕ ಉಪನ್ಯಾಸಕ ಡಾ.ಅಣ್ಣಯ್ಯ ರಮೇಶ್‌ ಗಿನ್ನೆಸ್‌ವಿಶ್ವದಾಖಲೆ ಮಾಡಿದ್ದಾರೆ.

ಅವರು ಮಾಚ್‌22ರಂದು ಬೆಳಿಗ್ಗೆ 9ಗಂಟೆಯಿಂದ ಮ್ಯಾರಥಾನ್‌ ಉಪನ್ಯಾಸವನ್ನು ಆರಂಭಿಸಿ, ಭಾನುವಾರ(ಮಾರ್ಚ್‌ 26) ಬೆಳಿಗ್ಗೆ 11.35ರವರೆಗೆ ಮುಂದುವರಿಸಿದರು. ಆ ಮೂಲಕ ಗಿನ್ನೆಸ್‌ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳುವಂತೆ ಮಾಡಿದರು.
Dr. Annaiah Ramesh, who created Guinness Record ಈ ಹಿಂದೆ ಈ ದಾಖಲೆ ಆಂಧ್ರಪ್ರದೇಶದ ನಾರಾಯಣ ಶಿವಶಂಕರ್‌ ಅವರ ಹೆಸರಿನಲ್ಲಿತ್ತು. ಅವರು ಒಟ್ಟು 72ಗಂಟೆ 9ನಿಮಿಷಗಳ ಕಾಲ ಉಪನ್ಯಾಸ ನೀಡಿದ್ದರು. ಆನಂತರ ದಕ್ಷಿಣ ಆಫ್ರಿಕಾದ ಮೂಸಾವಾರಿkು, 88ಗಂಟೆ 4ನಿಮಿಷಗಳವರೆಗೆ ನಿರಂತರ ಉಪನ್ಯಾಸ ಮಾಡಿ, ಗಿನ್ನೆಸ್‌ ದಾಖಲೆ ತಮ್ಮ ಹೆಸರು ಪರಿಗಣಿಸುವಂತೆ ಕೋರಿದ್ದರು.

ನಗರದ(ಮಂಗಳೂರು) ವಿಶ್ವವಿದ್ಯಾಲಯದಲ್ಲಿ ಆನ್ವಯಿಕ ಸಸ್ಯಶಾಸ್ತ್ರ ಉಪನ್ಯಾಸಕರಾಗಿರುವ ಡಾ.ಅಣ್ಣಯ್ಯ, ಇವರಿಬ್ಬರ ದಾಖಲೆಗಳನ್ನೂ ಪುಡಿಗುಟ್ಟಿ, ಹೊಸ ದಾಖಲೆ ನಿರ್ಮಿಸಿದ್ದು, ದಾಖಲೆ ಪ್ರಿಯರಲ್ಲಿ ಅಪಾರ ಹರ್ಷ ಉಂಟುಮಾಡಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X