• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಯವಿಟ್ಟು ನನ್ನ ಚಿಕಿತ್ಸೆಗೆ ಸ್ವಲ್ಪ ಸಹಾಯಮಾಡಿ...

By Staff
|

ದಯವಿಟ್ಟು ನನ್ನ ಚಿಕಿತ್ಸೆಗೆ ಸ್ವಲ್ಪ ಸಹಾಯಮಾಡಿ...

ಮನೆಯ ಆಧಾರ ಸ್ತಂಭವಾಗಿದ್ದ ಕಿರ್ಲೋಸ್ಕರ್‌ ಇಂಜಿನೀಯರ್‌, ಆಕಸ್ಮಿಕ ಅಪಘಾತದಿಂದ ತನ್ನ ತಂದೆ-ತಾಯಿಯ ಅವಲಂಬನೆಯಲ್ಲಿ ಐದು ವರ್ಷಗಳಿಂದ ಹಾಸಿಗೆಯಲ್ಲಿಯೇ ಏಳಲಾಗದೆ, ಓಡಾಡಲೂ ಆಗದೆ ನರಳುತ್ತಿದ್ದಾರೆ. ಮತ್ತೊಂದು ಆಘಾತಕರ ಸಂಗತಿಯೆಂದರೆ, ಬದುಕಿಗೆ ಊರುಗೋಲಾಗಿದ್ದ ವಿಶಾಲ್‌ ಅವರ ತಂದೆ ಕೂಡ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ನಿಮ್ಮ ಸಾಂತ್ವನ ಧನ ಸಹಾಯದ ರೂಪದಲ್ಲಿರಲಿ.

ಕಿರ್ಲೋಸ್ಕರ್‌ ಕಂಪನಿಯಲ್ಲಿ ಇಂಜಿನೀಯರಾಗಿ ಕೆಲಸ ಮಾಡುತ್ತಿದ್ದ ಪಿ.ಡಿ.ವಿಶಾಲ್‌ ಎಂಬುವವರು ಆಕಸ್ಮಿಕ ಅಪಘಾತವೊಂದರಲ್ಲಿ ಪವಾಡ ಸದೃಶವಾಗಿ ಬದುಕೇನೋ ಉಳಿದರು. ಆದರೆ, ಬೆನ್ನು ಮೂಳೆಗೆ ಬಿದ್ದ ಭಾರೀ ಏಟಿನಿಂದ ಕಾಲುಗಳ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡರು. ತಂದೆ ಹಾಗೂ ತಾಯಿಯ ಅವಲಂಬನೆಯಿಂದ ಬದುಕಿರುವ ಅವರು, ಬೆನ್ನು ಮೂಳೆ ಚಿಕಿತ್ಸೆಯಿಂದ ಮತ್ತೆ ಮೊದಲಿನಂತೆ ಚೈತನ್ಯ ಪಡೆಯುವ ಕನಸು ಕಾಣುತ್ತಿದ್ದಾರೆ. ಈ ಚಿಕಿತ್ಸೆ ದುಬಾರಿಯಾಗಿದ್ದು, ನೆರೆಯ ಚೀನಾದಲ್ಲಿ ಲಭ್ಯವಿದೆ. ಚಿಕಿತ್ಸೆಗೆ ನೆರವು ಕೋರಿ ಅವರು, ಕನ್ನಡದ ಬಂಧುಗಳಿಗೆ ಮನವಿಮಾಡಿಕೊಂಡಿದ್ದಾರೆ. ಆ ಮನವಿ ಪತ್ರದ ಯಥಾರೂಪ ಕೆಳಗಿನಂತಿದೆ.

ಕನ್ನಡ ಮಿತ್ರರಿಗೆಲ್ಲ ನನ್ನ ನಮಸ್ಕಾರ...

Vishal - Thenಮಿತ್ರರೇ ಭವಿಷ್ಯದ ಬಗ್ಗೆ ಭವ್ಯ ಕನಸು ಕಂಡಿದ್ದ ನಾನು, ಬೆಂಗಳೂರಿನ ಜಿಗಣಿಯಲ್ಲಿರುವ ಕಿರ್ಲೋಸ್ಕರ್‌ ಟೊಯೋಡಾ ಟೆಕ್ಸ್‌ಟೈಲ್‌ ಮಷಿನರಿ ಲಿಮಿಟೆಡ್‌ನಲ್ಲಿ ಇ0ಜಿನೀಯರಾಗಿ ಕೆಲಸ ಮಾಡುತಿದ್ದೆ. ನನಗೆ 28 ವರ್ಷ, ಮೈಸೂರಿನಲ್ಲಿ ವಾಸವಾಗಿದ್ದೇನೆ. ಈಗ ನನ್ನ ಮಂಕಾದ ಭವಿಷ್ಯದ ಬಗ್ಗೆ ಕೊರಗುತ್ತಾ ಪರಾವಲಂಬಿಯಾಗಿ ಮಲಗಿದ್ದೇನೆ. ನನ್ನ ತಂದೆ ಕರ್ನಾಟಕ ರಾಜ್ಯ ಕಾಯ್ದಿಟ್ಟ ಪೊಲೀಸ್‌ ಪಡೆ(ಕೆಎಸ್‌ಆರ್‌ಪಿ)ಯಲ್ಲಿದ್ದರು. ಈಗ ನಿವೃತ್ತಿ ಹೊಂದಿದ್ದಾರೆ. ಐದು ವರ್ಷದ ಹಿಂದೆ ನನ್ನ ಕನಸುಗಳೆಲ್ಲವೂ ನುಚ್ಚುನೂರಾದವು.

ಬಸ್ಸಿನಲ್ಲಿ ಪ್ರಯಾಣಿಸುವಾಗ ರಸ್ತೆ ಅಪಘಾತವಾಗಿ ನನ್ನ ಹೊಟ್ಟೆ ಹಾಗೂ ಬೆನ್ನುಮೂಳೆಗೆ ಏಟು ಬಿತ್ತು. ಇದು ಪದ್ಮನಾಭನಗರದ ಕಿತ್ತೂರು ರಾಣಿ ಚೆನಮ್ಮ ವೃತದಲ್ಲಿ ಸಂಭವಿಸಿತು. ತಕ್ಷಣ ಸಮೀಪದಲ್ಲಿರುವ ಡಿ.ಜಿ.ಆಸ್ಪತ್ರೆಗೆ ಸೇರಿಸಲಾಯಿತು. ಡಾಕ್ಟರುಗಳ ಸತತ ಪ್ರಯತ್ನದಿಂದ ನನ್ನ ಪ್ರಾಣವೇನೋ ಉಳಿಯಿತು. ಆದರೆ, ಬೆನ್ನುಮೂಳೆಗೆ ಬಿದ್ದ ಏಟಿನಿಂದ ನನ್ನ ಕಾಲುಗಳ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡು ನನ್ನ ವಯಸ್ಸಾದ ತಂದೆ, ತಾಯಿಯ ಮೇಲೆ ಸಂಪೂರ್ಣ ಅವಲಂಬಿತನಾಗಿದ್ದೇನೆ. ಕಾಲುಗಳಿಗೆ ಸ್ಪರ್ಶ ಶಕ್ತಿಯೂ ಇಲ್ಲವಾಯಿತು. ಮಲಮೂತ್ರ ವಿಸರ್ಜನೆಯಾಗುವುದು ತಿಳಿಯುತ್ತಿಲ್ಲ. ಬೇರೆಯವರ ನೆರವಿಲ್ಲದೆ ಹಾಸಿಗೆಯಲ್ಲಿ ಹೊರಳಿ ಮಲಗಲೂ ಸಾಧ್ಯವಾಗುತ್ತಿಲ್ಲ. ಬೆಡ್ಸೋರ್‌ ಮತ್ತು ಯೂರಿನ್‌ ಇನ್‌ಫೆಕ್ಷನ್‌ನಿಂದ ಆಗುವ ತೊಂದರೆ ಕಾಡುತ್ತಿದೆ.

Vishal - Nowಮನೆಯ ಆಧಾರ ಸ್ತಂಭವಾಗಿದ್ದ ನಾನು, ಈಗ ಪೋಷಕರಿಗೆ ಹೊರೆಯಾಗಿದ್ದೇನೆ. ನನ್ನ ಚಿಕಿತ್ಸೆಗಾಗಿ ಮಾಡಿರುವ ಸಾಲದ ಹೊರೆಯೂ ಬೆಳೆಯುತ್ತಿದೆ. ನನ್ನ ಮನೆಯ ಸ್ಥಿತಿಯನ್ನು ಕಂಡು ಕಂಪನಿಯವರೇ ಆಸ್ಪತ್ರೆ ವೆಚ್ಚ ಭರಿಸಿದ್ದಾರೆ. ಐದು ವರುಷವಾದರೂ ನಿಲ್ಲಲು ಕೂಡ ಸಾಧ್ಯವಾಗಿಲ್ಲ.

ನಾನು ಈಗ ಶೋಚನೀಯವಾದ ಸ್ಥಿತಿಯಲ್ಲಿ ಬದುಕುತ್ತಿದ್ದೇನೆ. ಈ ಸ್ಥಿತಿಯಿಂದ ಹೊರಬರಬೇಕಾದರೆ ನನ್ನ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ. ಆ ತರಹದ ಚಿಕಿತ್ಸೆ ಭಾರತದಲ್ಲಿ ಇಲ್ಲದ ಕಾರಣ ನೆರೆಯ ಚೀನಾದೇಶಕ್ಕೆ ಹೋಗಬೇಕಾಗಿದೆ. ಆದಕ್ಕೆ ಸುಮಾರು 9 ಲಕ್ಷ ರೂಪಾಯಿ ಖರ್ಚಾಗುತ್ತದೆ. 4,100ರೂಪಾಯಿ ನಿವೃತ್ತಿ ವೇತನದಲ್ಲಿ ಜೀವನ ಸಾಗಿಸುತ್ತಿರುವ ನಾವು ಆಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಿದೆ.

ನನ್ನ ತಂದೆ, ತಾಯಿ ಇರುವತನಕ ನೋಡಿಕೊಳುತ್ತಾರೆ. ಮುಂದಿನ ದಿನಗಳನ್ನು ಯೋಚಿಸಿದರೆ ಚಿಂತೆಯಾಗುತ್ತದೆ. ನಾನು ನನ್ನ ಕನ್ನಡಿಗರಲ್ಲಿ ಬೇಡಿಕೊಳ್ಳುವುದೇನೆಂದರೆ, ದಯಾಳುಗಳಾದ ಓದುಗರು ತಮ್ಮಿಂದಾಗುವ ರೀತಿಯಲ್ಲಿ ಹಣದ ಸಹಾಯ ಮಾಡಿದರೆ, ಹನಿ ಹನಿಗೂಡಿದರೆ ಹಳ್ಳವಾಗುವ ಹಾಗೆ, ನೂರಾರು ಜನರ ನೆರವಿನಿಂದ ನನ್ನ ಚಿಕಿತ್ಸೆ ಮಾಡಿಸಬಹುದೆಂಬ ಆಸೆಯಿಂದ ಕೈಜೋಡಿಸಿ ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ಭವಿಷ್ಯದ ಬಗ್ಗೆ ಭವ್ಯ ಕನಸು ಕಂಡಿದ್ದ ನಾನು ನಿಮ್ಮೆಲ್ಲರ ಸಹಕಾರದಿಂದ ಮತ್ತೆ ನವಚೈತನ್ಯ ಪಡೆಯುವೆ ಎಂದು ನಂಬಿದ್ದೇನೆ.

ದಯವಿಟ್ಟು ನನ್ನ ಚಿಕಿತ್ಸೆಗೆ ಸಹಾಯ ಮಾಡುವಿರಾ...?

ನಿಮ್ಮ ಸಹಾಯದ ನಿರೀಕ್ಷೆಯಲ್ಲಿ...

ಪಿ.ಡಿ.ವಿಶಾಲ್‌

231, ಸಿದ್ಧಿವಿನಾಯಕ ಬ್ಲಾಕ್‌, ಟೀಚರ್ಸ್‌ ಲೇಔಟ್‌, ಮೈಸೂರು - 570011.

ಫೋನ್‌ : (0821)2476582.

ನನ್ನ ಸಂಪೂರ್ಣ ಮಾಹಿತಿಗಾಗಿ ಕೆಳಕಾಣಿಸಿದ ವೆಬ್‌ಸೈಟ್‌ ಲಾಗಾನ್‌ ಮಾಡಿ : www.helpformylife.com

ನನ್ನ ಕಂಪೆನಿ ವಿಳಾಸ, ನನ್ನ ಫೋಟೋ, ನನ್ನ ಮೆಡಿಕಲ್‌ ರಿಪೋರ್ಟುಗಳು, ಬ್ಯಾಂಕ್‌ ಮಾಹಿತಿ ಹಾಗೂ ಡಾಕ್ಟರ್‌ ಬಗ್ಗೆ ಈ ವೈಬ್‌ಸೈಟಿನಲ್ಲಿ ಮಾಹಿತಿ ಲಭ್ಯವಿದೆ.

ಚೀನಾ ಡಾಕ್ಟರ್‌ ಮಾಹಿತಿ :

Dr. Huang Hongyun.

Neuroligical Disorder Research & treatment Centre of Beijing, Xi Shan Hospital, Shijing Shan District, Beijing – 100041, CHINA. Phone: -0086-10-88965507.

ದಾನಿಗಳು ಕೆಳಕಾಣಿಸಿದ ಬ್ಯಾಂಕುಗಳ ಖಾತೆಗಳಿಗೆ ಹಣ ಕಳುಹಿಸಬೇಕೆಂದು ವಿನಮ್ರ ಪ್ರಾರ್ಥನೆ...

ICICI Saving Bank Account Number : 625501509002 (#34/2,3,4, Ramavilas Branch, Ramavilas Road, Mysore –570024.) ಆನ್‌ಲೈನ್‌ ಮೂಲಕ ಅಥವಾ

SBI Saving Account number: -10562384980. (Mysore branch, Post box No : 204, New Sayyaji Rao Road, Mysore –570024.) ಜಮಾ ಮಾಡಬಹುದು.

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more