ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೀಕ್ಷೆಗೆ ಹೆದರಿ ಯುಟಿಲಿಟಿ ಕಟ್ಟಡದಿಂದ ಜಿಗಿದ ನತದೃಷ್ಟೆ!

By Staff
|
Google Oneindia Kannada News

ಪರೀಕ್ಷೆಗೆ ಹೆದರಿ ಯುಟಿಲಿಟಿ ಕಟ್ಟಡದಿಂದ ಜಿಗಿದ ನತದೃಷ್ಟೆ!
ನರ್ಸಿಂಗ್‌ ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆ, ಸಾವಿಗೆ ಖಿನ್ನತೆಯೇ ಕಾರಣ

ಬೆಂಗಳೂರು : ಪರೀಕ್ಷೆಯ ಭಯದಿಂದ ವಿದ್ಯಾರ್ಥಿನಿಯಾಬ್ಬಳು ನಗರದ ಯುಟಿಲಿಟಿ ಕಟ್ಟಡದ 21ನೇ ಮಹಡಿಯಿಂದ ಜಿಗಿದು, ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ತಡವಾಗಿ ವರದಿಯಾಗಿದೆ.

ಮೃತಪಟ್ಟವಳನ್ನು ಹಾಸ್‌ಮಟ್‌ ನರ್ಸಿಂಗ್‌ ಕಾಲೇಜಿನ, ಅಂತಿಮ ವರ್ಷದ ವಿದ್ಯಾರ್ಥಿನಿ ಶ್ವೇತಾ ದಾಲಿಯಾ(21) ಎಂದು ಗುರ್ತಿಸಲಾಗಿದೆ. ದೆಹಲಿ ಮೂಲದ ಈಕೆ, ಸಾವಿಗೆ ಮುನ್ನ ಬರೆದಿರುವ ಪತ್ರ ಪತ್ತೆಯಾಗಿದೆ.

ನಾನು ಓದಿನಲ್ಲಿ ಜಾಣೆ. ಆದರೆ ಮುಂದೆ ಅತಿ ಕಡಿಮೆ ಅಂಕಗಳಿಸುವುದು ನನಗೆ ಇಷ್ಟವಿಲ್ಲ. ಹೀಗಾಗಿ ಬದುಕಿನ ಬಗ್ಗೆ ಆಸಕ್ತಿ ಕಳೆದು ಕೊಂಡು ಸಾವಿಗೆ ಶರಣಾಗುತ್ತಿದ್ದೇನೆ. ನನ್ನ ಸಾವಿನ ವಿಚಾರವನ್ನು ನನ್ನ ಮನೆಯವರಿಗೆ ತಿಳಿಸಿ ಬಿಡಿ ಎಂದು ಶ್ವೇತಾ ಪತ್ರದಲ್ಲಿ ಬರೆದಿದ್ದಾಳೆ.

ಏಪ್ರಿಲ್‌ನಲ್ಲಿ ನರ್ಸಿಂಗ್‌ ಪರೀಕ್ಷೆ ನಡೆಯಲಿವೆ. ಪರೀಕ್ಷೆ ಎಂಬುದು ಬದುಕಿನ ಒಂದು ಪ್ರಮುಖ ಕಾಲಘಟ್ಟ. ಹೀಗೆಂದು ಪರೀಕ್ಷೆಯೇ ಬದುಕಲ್ಲ. ಜೊತೆಗೆ ಭವಿಷ್ಯವಲ್ಲ ಎಂಬ ಸತ್ಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯತೆಯನ್ನು, ಈ ಆತ್ಮಹತ್ಯೆ ಎತ್ತಿ ಹಿಡಿದಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X