ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚಕ ವೈದ್ಯ ಅಸ್ಲಂ ಬಾಬಾಗೆ ಆರು ತಿಂಗಳ ಜೈಲು ಶಿಕ್ಷೆ

By Staff
|
Google Oneindia Kannada News

ವಂಚಕ ವೈದ್ಯ ಅಸ್ಲಂ ಬಾಬಾಗೆ ಆರು ತಿಂಗಳ ಜೈಲು ಶಿಕ್ಷೆ
ಮೂರು ವರ್ಷಗಳ ವಿಚಾರಣೆ ನಂತರ ಶಿಕ್ಷೆ, ಶಿಕ್ಷೆ ಬಗೆಗೆ ಬಾಬಾ ಅಸಮಾಧಾನ

ಬೆಂಗಳೂರು : ವಿವಾದಾತ್ಮಕ ನಾಟಿ ವೈದ್ಯ ಅಸ್ಲಂ ಬಾಬಾಗೆ ಬಾಗಲಕೋಟೆಯ ಸ್ಥಳೀಯ ನ್ಯಾಯಾಲಯ ಆರು ತಿಂಗಳ ಕಠಿಣ ಶಿಕ್ಷೆ ಮತ್ತು ರೂ.100 ದಂಡ ವಿಧಿಸಿದೆ.

ಬಾಬಾ ವಂಚನೆ ವಿರುದ್ಧ ಬೆಂಗಳೂರಿನ ಆಯುರ್ವೇದ ಹಾಗೂ ಯುನಾನಿ ವೈದ್ಯ ಮಂಡಳಿಯ ಡಾ.ಹನುಮಂತೇಗೌಡ ಪ್ರಕರಣ ದಾಖಲಿಸಿದ್ದರು. ಕಳೆದ ಮೂರು ವರ್ಷಗಳಿಂದ ವಿಚಾರಣೆ ನಡೆಸಿದ, ಬಾಗಲಕೋಟೆಯ ಒಂದನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ.

ಈ ತೀರ್ಪನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಸುದ್ದಿಗಾರರಿಗೆ ಅಸ್ಲಂ ಬಾಬಾ ತಿಳಿಸಿದ್ದಾನೆ. ಬ್ಲೇಡ್‌ ಬಾಬಾ ಎಂಬ ಕುಖ್ಯಾತಿಗೆ ಗುರಿಯಾಗಿರುವ ಅಸ್ಲಂ ಬಾಬಾ ವಿರುದ್ಧ ಅನೇಕ ಪ್ರಕರಣಗಳು ಈ ಹಿಂದೆ ದಾಖಲಾಗಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X