• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗರದಲ್ಲಿ ಲೋಕಸೇವಾ ಆಯೋಗಗಳ ರಾಷ್ಟ್ರೀಯ ಸಮ್ಮೇಳನ

By Staff
|

ನಗರದಲ್ಲಿ ಲೋಕಸೇವಾ ಆಯೋಗಗಳ ರಾಷ್ಟ್ರೀಯ ಸಮ್ಮೇಳನ

ಮಾನವ ಸಂಪನ್ಮೂಲ ಸದ್ಬಳಕೆಗೆ ವಿಧಾನ, ಯುವಜನರ ಅವಶ್ಯಕತೆಗಳಿಗೆ ಸ್ಪಂದನ -ಡಾ.ಎಚ್‌.ಎನ್‌.ಕೃಷ್ಣ

ಬೆಂಗಳೂರು : ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 9ನೇ ರಾಷ್ಟ್ರೀಯ ಸಮ್ಮೇಳನ, ಮಾರ್ಚ್‌4ರಿಂದ 5ರವರೆಗೆ ನಗರದಲ್ಲಿ ನಡೆಯಲಿದೆ.

ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಎಚ್‌.ಎನ್‌.ಕೃಷ್ಣ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ, ಸಮ್ಮೇಳನ ಆಯೋಗದ ನೂತನ ಕಟ್ಟಡದಲ್ಲಿ ನಡೆಯಲಿದೆ ಎಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಸಮ್ಮೇಳನ ಉದ್ಘಾಟಿಸಲಿದ್ದು, ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಎಸ್‌.ಆರ್‌.ಹಾಶಿಮ್‌ ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.

ಸರ್ಕಾರದಲ್ಲಿ ಮಾನವ ಸಂಪನ್ಮೂಲ ಬಳಸುವ ವಿಧಾನ ಹಾಗೂ ಯುವ ಜನತೆಯ ಔದ್ಯೋಗಿಕ ಅವಶ್ಯಕತೆಗಳನ್ನು ಪೂರೈಸುವ ಕುರಿತು ಚರ್ಚಿಸಲಾಗುವುದು. ಅಲ್ಲದೆ, ದೇಶದ ವಿವಿಧ ಲೋಕಸೇವಾ ಆಯೋಗಗಳು ಈ ಕುರಿತು ತೆಗೆದುಕೊಂಡ ನಿರ್ಣಯಗಳ ಮೇಲೂ ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು.

ಲೋಕಸೇವಾ ಆಯೋಗಗಳ ಪರೀಕ್ಷೆ ಮತ್ತು ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಎಲ್ಲ ತೀರ್ಪುಗಳನ್ನು ಕ್ರೋಡೀಕರಿಸಲಾಗಿರುವ, ಎರಡನೇ ಸಂಪುಟ ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more