ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಮೇಲ್‌ ರವಾನಿಸಿ,ನೆಚ್ಚಿನ ಸಿನಿಮಾ ಮನೆಯಲ್ಲೇ ನೋಡಿ!

By Staff
|
Google Oneindia Kannada News

ಇ-ಮೇಲ್‌ ರವಾನಿಸಿ,ನೆಚ್ಚಿನ ಸಿನಿಮಾ ಮನೆಯಲ್ಲೇ ನೋಡಿ!
ವಿನೂತನ ಸೇವೆಗೆ ನಟಿ ವಸುಂಧರಾ ದಾಸ್‌ ಅವರಿಂದ ಚಾಲನೆ

ಬೆಂಗಳೂರು : ಗ್ರಾಹಕರು ತಮ್ಮ ಮೆಚ್ಚಿನ ಚಲನಚಿತ್ರಗಳ ಡಿವಿಡಿಗಳನ್ನು ಮನೆಬಾಗಿಲಲ್ಲಿಯೇ ಪಡೆಯಬಹುದು.

ಬಾಡಿಗೆ ಪಾವತಿಸಿದರೆ ಸಾಕು! ಇಂತಹ ನೂತನ ಸೇವೆಯನ್ನು ಸೆವೆಂಟಿಎಂಎಂ ಸಂಸ್ಥೆ ನಗರದಲ್ಲಿ ಆರಂಭಿಸಿದೆ. ಈ ಸೇವೆಯನ್ನು ನಟಿ ವಸುಂಧರ ದಾಸ್‌ ಉದ್ಘಾಟಿಸಿದರು.

ಸೇವೆ ಪಡೆಯುವುದು ಹೇಗೆ? : ಸಂಸ್ಥೆಯು www.seventymm.com ವೆಬ್‌ ಸೈಟ್‌ನ್ನು ಹೊಂದಿದ್ದು, ಗ್ರಾಹಕರು ತಮಗೆ ಬೇಕಾಗುವ ಮೆಚ್ಚಿನ ಚಿತ್ರಗಳನ್ನು ಇ-ಮೆಲ್‌ ಮಾಡಿ ಪಡೆಯಬಹುದು. ಡಿವಿಡಿಗಳನ್ನು ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಈ ಸಂಸ್ಥೆ ಹೊಂದಿದೆ.

ಈ ಡಿವಿಡಿಗಳನ್ನು ಗ್ರಾಹಕರು ಬಯಸಿದ ದಿನಗಳಷ್ಟು ಹೆಚ್ಚುವರಿ ಹಣ ಪಾವತಿಸದೆ ಇಟ್ಟುಕೊಳ್ಳಬಹುದು. ಅಲ್ಲದೇ ಸಿನಿಮಾ ನೋಡಿದ ಬಳಿಕ ಮತ್ತೆ ಇ-ಮೇಲ್‌ ಮಾಡಿದರೆ, ಈ ಸಂಸ್ಥೆಯ ಸಿಬ್ಬಂದಿ ಮನೆಗೆ ಬಂದು ಡಿವಿಡಿಯನ್ನು ವಾಪಸ್‌ ಪಡೆಯುತ್ತಾರೆ.

ಸೆವೆಂಟಿಎಂಎಂ ಸಂಸ್ಥೆಯು ಇಂಗ್ಲಿಷ್‌, ಕನ್ನಡ ಸೇರಿದಂತೆ ಆರು ಭಾಷೆಗಳ 10 ಸಾವಿರ ಚಲನಚಿತ್ರಗಳ ಡಿವಿಡಿಗಳನ್ನು ಸಂಗ್ರಹಿಸಿದೆ.

ವಿಶೇಷತೆಗಳು : ತಿಂಗಳಿಗೆ ರೂ.199 ಪಾವತಿಸಿ, ನಾಲ್ಕು ಚಿತ್ರಗಳ ಡಿವಿಡಿ ಪಡೆಯಬಹುದು. ನೀವು ರೂ.540 ನೀಡಿದರೆ, ನಿಮಗೆ ಬೇಕಾದಷ್ಟು ಚಿತ್ರಗಳಿಗೆ ಬೇಡಿಕೆ ಸಲ್ಲಿಸಬಹುದು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X