ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚಕ ವ್ಯಾಪಾರಿಗಳಿಂದ 2 ಕೋಟಿ ರೂ.ದಂಡ ವಸೂಲಿ

By Staff
|
Google Oneindia Kannada News

ವಂಚಕ ವ್ಯಾಪಾರಿಗಳಿಂದ 2 ಕೋಟಿ ರೂ.ದಂಡ ವಸೂಲಿ
ತೂಕ ಮತ್ತು ಅಳತೆಯಲ್ಲಿ ಗ್ರಾಹಕರಿಗೆ ಮೋಸಮಾಡೀರಿ ಜೋಕೆ -ಇಲಾಖೆ ಎಚ್ಚರಿಕೆ

ಬೆಂಗಳೂರು : ರಾಜ್ಯದ ತೂಕ ಮತ್ತು ಅಳತೆಗೆ ಸಂಬಂಧಿಸಿದ ಇಲಾಖೆ, ಸುಮಾರು 2ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ವಂಚಕ ವ್ಯಾಪಾರಿಗಳಿಂದ ಸಂಗ್ರಹಿಸಿದೆ.

ಗ್ರಾಹಕರನ್ನು ವಂಚಿಸುವ ಸುಮಾರು 28ಸಾವಿರ ವ್ಯಾಪಾರಿಗಳನ್ನು ಏ.2005ರಿಂದ ಈವರೆಗೆ ಇಲಾಖೆ ಪತ್ತೆಹಚ್ಚಿದೆ. ಅನಿರೀಕ್ಷಿತ ದಾಳಿಗಳ ಮೂಲಕ ಅಳತೆ ಮತ್ತು ತೂಕದಲ್ಲಿ ವಂಚಿಸುವ ವ್ಯಾಪಾರಿಗಳಿಂದ 2.12ಕೋಟಿ ದಂಡವನ್ನು ಇಲಾಖೆ ವಸೂಲು ಮಾಡಿದೆ ಎಂದು ಇಲಾಖೆ ಶುಕ್ರವಾರ ತಿಳಿಸಿದೆ.

ಈ ಸಾಲಿನಲ್ಲಿ ಇಲಾಖೆ 7.69ಕೋಟಿ ರೂ.ಗಳನ್ನು ವರ್ತಕರಿಗೆ ಪ್ರಮಾಣ ಪತ್ರ ನೀಡುವ ಮೂಲಕ ಗಳಿಸಿದೆ. ಖಾಲಿ ಉಳಿದಿರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿದರೆ, ಇನ್ನಷ್ಟು ಆದಾಯಗಳಿಸುವ ಗುರಿಯನ್ನು ಇಲಾಖೆ ಹೊಂದಿದೆ.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X