ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕುಟೋದ್ಯಮ ರಕ್ಷಣೆಗೆ ಸರ್ಕಾರದಿಂದ 35ಕೋಟಿ

By Staff
|
Google Oneindia Kannada News

ಕುಕ್ಕುಟೋದ್ಯಮ ರಕ್ಷಣೆಗೆ ಸರ್ಕಾರದಿಂದ 35ಕೋಟಿ
ಹಾಸನ ಜಿಲ್ಲೆಯಲ್ಲಿ ಹಕ್ಕಿಜ್ವರದಿಂದ ಯಾರೂ ಸತ್ತಿಲ್ಲ -ಕುಮಾರಸ್ವಾಮಿ

ಬೆಂಗಳೂರು : ಕೋಳಿ ಉತ್ಪನ್ನಗಳ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ತುರ್ತು ಪರಿಹಾರ ನೀಡಲು 35ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಈ ಮಾಹಿತಿ ನೀಡಿದ ಅವರು, ಹಕ್ಕಿಜ್ವರದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಕ್ಕುಟೋದ್ಯಮದ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಈ ಉದ್ಯಮದಲ್ಲಿ ತೊಡಗಿರುವ 15ಲಕ್ಷ ಮಂದಿ ಬೀದಿಪಾಲಾಗದಂತೆ ಎಚ್ಚರವಹಿಸುವುದಾಗಿ ಹೇಳಿದರು.

ಹಾಸನ ಜಿಲ್ಲೆಯ ಅರಕಲಗೂಡಿನ ಆನಂದ್‌ ಸಾವಿನ ಕಾರಣ ಪತ್ತೆಯಾಗಿಲ್ಲ. ಅವರ ಸಾವಿಗೂ ಹಕ್ಕಿಜ್ವರಕ್ಕೂ ಸಂಬಂಧವಿಲ್ಲ ಎಂದು ವೈದ್ಯಕೀಯ ಪರೀಕ್ಷೆಗಳು ಸಾಬೀತುಪಡಿಸಿವೆ ಎಂದು ಕುಮಾರಸ್ವಾಮಿ ಹೇಳಿದರು.

ಸರ್ಕಸ್‌ : ರಾಜ್ಯದಲ್ಲಿ ಕೋಳಿಗಳಿರಲಿ, ಮೊಟ್ಟೆಗಳನ್ನು ತಿನ್ನಲೂ ಸಹಾ ಜನರು ಮುಂದೆ ಬರುತ್ತಿಲ್ಲ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಕುಕ್ಕುಟೋದ್ಯಮ ನಾನಾ ಸರ್ಕಸ್‌ಗಳನ್ನು ಮಾಡುತ್ತಿದೆ. ರಾಜ್ಯದ ವಿವಿಧೆಡೆ ಚಿಕನ್‌ ಖಾದ್ಯಗಳ ತಯಾರಿಸಿ, ಉಚಿತವಾಗಿ ವಿತರಿಸುವ ಕೆಲಸವೂ ನಡೆದಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X