ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಶಿಕ್ಷಣ ತಜ್ಞ ಪ್ರೊಫೆಸರ್‌ ಬಿ.ಬಿ.ಪಾಟೀಲ್‌ ಅಂತ್ಯಕ್ರಿಯೆ

By Staff
|
Google Oneindia Kannada News

ಖ್ಯಾತ ಶಿಕ್ಷಣ ತಜ್ಞ ಪ್ರೊಫೆಸರ್‌ ಬಿ.ಬಿ.ಪಾಟೀಲ್‌ ಅಂತ್ಯಕ್ರಿಯೆ
ರಾಜ್ಯಶಾಸ್ತ್ರ ಬೋಧನೆ ; ಶಾಲಾಕಾಲೇಜುಗಳ ಸ್ಥಾಪನೆ, ಲೋಕಸೇವಾ ಆಯೋಗದಲ್ಲೂ ಸೇವೆಗೈದ ಪಾಟೀಲ್‌ ಇನ್ನೆಲ್ಲಿ?

ಗುಲ್ಬರ್ಗಾ : ಖ್ಯಾತ ಶಿಕ್ಷಣ ತಜ್ಞ ಹಾಗೂ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಮಾಜಿ ಸದಸ್ಯ ಪ್ರೊ.ಬಿ.ಬಿ.ಪಾಟೀಲ್‌ ಓಕಳಿ(68) ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನಗರದ ಓಕಳಿ ವಿದ್ಯಾಮಂದಿರದ ಆವರಣದಲ್ಲಿ ನೆರವೇರಿತು.

ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು, ಬೆಂಗಳೂರಿನಲ್ಲಿರುವ ತಮ್ಮ ಸ್ವಗೃದದಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದರು. ಪತ್ನಿ, ಇಬ್ಬರು ಪುತ್ರರು , ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿರುವ ಪಾಟೀಲ್‌, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನಿಕಟವರ್ತಿಯಾಗಿದ್ದರು. ಅವರು, 1991ರಿಂದ 1997ರವರೆಗೆ ಕೆಪಿಎಸ್‌ಸಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

ಹಲವಾರು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದ ಪ್ರೊ.ಪಾಟೀಲ್‌, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿಯೂ ದುಡಿದಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X