ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಬಿ.ಎಂ.ಹೆಗಡೆಗೆ ಬಿಹಾರ ಆರೋಗ್ಯ ಸಮಿತಿ ಸಾರಥ್ಯ

By Staff
|
Google Oneindia Kannada News

ಡಾ.ಬಿ.ಎಂ.ಹೆಗಡೆಗೆ ಬಿಹಾರ ಆರೋಗ್ಯ ಸಮಿತಿ ಸಾರಥ್ಯ
ಆರೋಗ್ಯ ಮೂಲಸೌಕರ್ಯ ಬಗೆಗಿನ ಬಿಹಾರ ಮುಖ್ಯಮಂತ್ರಿಯ ಕನಸು, ಈಗ ನನಸು?

ಮಂಗಳೂರು : ವೈದ್ಯಕೀಯ ಶಿಕ್ಷಣ ತಜ್ಞ ಹಾಗೂ ಮಣಿಪಾಲ್‌ ಉನ್ನತ ಶಿಕ್ಷಣ ಅಕಾಡೆಮಿಯ ಮಾಜಿ ಕುಲಪತಿ ಡಾ.ಬಿ.ಎಂ.ಹೆಗಡೆ, ಬಿಹಾರ ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಿಹಾರ ಸರ್ಕಾರ ನಾಮಕರಣ ಮಾಡಿದ್ದು, ಈ ಕುರಿತು ಪ್ರಕಟಣೆ ಹೊರಡಿಸಿದೆ. ಬಿಹಾರ ಮುಖ್ಯಮಂತ್ರಿಉತ್ಸಾಹದಿಂದ ಈ ಸಮಿತಿ ಜನ್ಮತಾಳಿದ್ದು, ರಾಜ್ಯದ ಆರೋಗ್ಯ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಸಲಹೆ ಸೂಚನೆಗಳನ್ನು ನೀಡಲಿದೆ.

ರಾಜ್ಯದಲ್ಲಿರುವ ಆಸ್ಪತ್ರೆಗಳು, ಶುಶ್ರೂಷಾ ಕೇಂದ್ರಗಳು ಹಾಗೂ ಕ್ಲಿನಿಕ್‌ಗಳನ್ನು ಸಮಿತಿಯು ತಪಾಸಣೆಗೊಳಪಡಿಸಬಹುದು. ಸಮಿತಿಯು ಖ್ಯಾತ ವೈದ್ಯರು ಹಾಗೂ ವೈದ್ಯಕೀಯ ಆಡಳಿತಗಾರರನ್ನು ಒಳಗೊಂಡಿರುತ್ತದೆ.

ಕನ್ನಡಿಗರಾದ ಡಾ.ಬಿ.ಎಂ.ಹೆಗಡೆ(ಬೆಳ್ಳೆ ಮೋನಪ್ಪ ಹೆಗಡೆ)ಓರ್ವ ವೈದ್ಯಕೀಯ ವಿಜ್ಞಾನಿ. ಅಲ್ಲದೆ ವೈದ್ಯಕೀಯ ಸೇವೆ ಹಾಗೂ ನೀತಿಯ ಕುರಿತು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X