ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ರಾಜೀನಾಮೆಗೆ ದಲಿತ ಸಂಘಗಳ ಪಟ್ಟು

By Staff
|
Google Oneindia Kannada News

ಯಡಿಯೂರಪ್ಪ ರಾಜೀನಾಮೆಗೆ ದಲಿತ ಸಂಘಗಳ ಪಟ್ಟು
ಮಾರ್ಚ್‌ 27ರಂದು ರಾಜ್ಯಾದ್ಯಂತ ಪ್ರತಿಭಟನೆ, ದಲಿತ ಸಚಿವ-ಶಾಸಕರಿಗೆ ಘೇರಾವ್‌

ಬೆಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನಗೊಳಿಸಿರುವ ಉಪಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು, ದಲಿತ ಮತ್ತು ಜಾತ್ಯತೀತ ಸಂಘಟನೆಗಳು ಒತ್ತಾಯಿಸಿವೆ.

ಈ ಸಂಘಟನೆಗಳು ಮಡಿವಾಳದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ರಸ್ತೆ ತಡೆ ನಡೆಸಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದವು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಫೆ. 7ರಂದು ದಲಿತ ಮುಖಂಡರೊಂದಿಗೆ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೂ ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ ಎಂದು ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ ಈ ಸಂದರ್ಭದಲ್ಲಿ ಆರೋಪಿದರು.

ಉಗ್ರ ಎಚ್ಚರಿಕೆ : ಪ್ರತಿಭಟನೆಯಲ್ಲಿ ಪಾಲ್ಗೊಂದಿದ್ದ ದಲಿತ ಸಂಘಟನೆಯ ನಾಯಕ ಮಾರಪ್ಪ ಮಾತನಾಡಿ, ಯಡಿಯೂರಪ್ಪ ರಾಜೀನಾಮೆ ಕೊಡ ಬೇಕು. ಇಲ್ಲದಿದ್ದರೆ ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಮಾಡಿದ ಅವರ ಕೈಗಳನ್ನು ತೆಗೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ರಾಜೀನಾಮೆ ನೀಡುವ ತನಕ ಈ ಹೋರಾಟ ನಿಲ್ಲದು. ಮಾರ್ಚ್‌ 1ರಂದು ಕನಕಪುರ ಜಂಕ್ಷನ್‌ ರಸ್ತೆಯಲ್ಲಿ ರಸ್ತೆ ತಡೆ ನಡೆಸಲಾಗುವುದು. ಆನಂತರ ಮಾರ್ಚ್‌ 8ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಬಂಧನಕ್ಕೆ ಆಗ್ರಹ : ಪ್ರಕರಣವನ್ನು ಖಂಡಿಸಿ ಮಾರ್ಚ್‌ 27ರಂದು ರಾಜ್ಯಾದ್ಯಂತ ದಲಿತ ಸಂಘಟನೆಗಳು ಜನಪರ ಹೋರಾಟ ಹಮ್ಮಿಕೊಂಡಿದ್ದು, 2ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಮಾವಳ್ಳಿ ಶಂಕರ್‌ ಹೇಳಿದರು.

ವಿಧಾನಸೌಧದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಅವರನ್ನು ತಕ್ಷಣವೇ ಬಂಧಿಸಬೇಕು. ಪ್ರಕರಣ ಕುರಿತು ಮಾತೆತ್ತದೇ ಕುಳಿತಿರುವ ದಲಿತ ಮಂತ್ರಿಗಳು ಶಾಸಕರ ವಿರುದ್ಧ ಘೇರಾವ್‌ ಹಾಕಲಾಗುವುದು ಎಂದು ದಲಿತ ಒಕ್ಕೂಟಗಳ ನಾಯಕರಾದ ಎಮ್‌. ಮರಿಸ್ವಾಮಿ, ಕೆ.ಚಂದ್ರಶೇಖರ್‌, ಪಟಾಪಟಿ ನಾಗರಾಜ್‌, ವಿ.ನಾಗರಾಜ್‌, ಲಕ್ಷ್ಮೀ ನಾರಾಯಣ್‌, ಅಣ್ಣಯ್ಯ, ಇಂದೂಧರ ಹೊನ್ನಾಪುರ ಆಗ್ರಹಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X