ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಮ್‌ ಈಗ ಅಸೋಮ್‌ ಆಯಿತು, ಬೆಂಗಳೂರು?

By Staff
|
Google Oneindia Kannada News

ಅಸ್ಸಾಮ್‌ ಈಗ ಅಸೋಮ್‌ ಆಯಿತು, ಬೆಂಗಳೂರು?
ಚಂದ್ರಪ್ರಸಾದ್‌ ಸೈಕಿಯಾ ಸಲಹೆಯಂತೆ, 180 ವರ್ಷಗಳ ಅಸ್ಸಾಮ್‌ ನಾಮಕ್ಕೆ ಎಳ್ಳುನೀರು

ಗುವಾಹಟಿ : ದೇಶಾದ್ಯಂತ ಹೆಸರು ಬದಲಾವಣೆ ಪ್ರಕ್ರಿಯೆ ಮುಂದುವರಿದಿದ್ದು, ಇನ್ನು ಮುಂದೆ ಅಸ್ಸಾಮ್‌ ರಾಜ್ಯ ಅಸೋಮ್‌ ಎಂದು ಕರೆಸಿಕೊಳ್ಳಲಿದೆ.

ಖ್ಯಾತ ಬರಹಗಾರ ಚಂದ್ರಪ್ರಸಾದ್‌ ಸೈಕಿಯಾ ರಾಜ್ಯ ಸರ್ಕಾರಕ್ಕೆ ಅಸ್ಸಾಮ್‌ನ ಹೆಸರು ಬದಲಿಸುವಂತೆ ನೀಡಿದ್ದ ಸಲಹೆಗೆ, ಸರ್ಕಾರ ಸಮ್ಮತಿಸಿದೆ. ವಿಧಾಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ ಸರ್ಕಾರ, ಅಸೋಮ್‌ ಪದವನ್ನು ಅಂಗೀಕರಿಸಿದೆ.

ಅಸ್ಸಾಮಿ ಭಾಷೆಯಲ್ಲಿ Asom ಎಂದರೆ, ಅಸಮ(ಬೆಸ) ಎಂದು ಅರ್ಥ. ಬ್ರಿಟಿಷರು ಇದನ್ನು ಸರಿಯಾಗಿ ಉಚ್ಚರಿಸಲಾಗದೆ Assam ಎಂದು ಕರೆಯುತ್ತಿದ್ದರು. ಅದನ್ನೇ ಕಳೆದ 180 ವರ್ಷಗಳಿಂದ ಮುಂದುವರೆಸಿಕೊಂಡು ಬರಲಾಗಿತ್ತು.

ಬೆಂಗಳೂರು ಕತೆ ಎಲ್ಲಿಗೆ...? : ಬಾಂಬೆ ಮುಂಬಯಿ ಆಯಿತು, ಮದ್ರಾಸ್‌ ಚೆನ್ನೈ ಆಯಿತು, ಕಲ್ಕತ್ತಾ ಕೋಲ್ಕತಾ ಆಯಿತು ಹಾಗೆ ಹಲವಾರು ಊರುಗಳು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡವು. ಆದರೆ, ಬೆಂಗಳೂರಿಗೆ ಇನ್ನೂ ಆ ಭಾಗ್ಯ ಬಂದಿಲ್ಲ.

ಸಾಹಿತ್ಯವಲಯ ಬ್ಯಾಂಗಲೋರ್‌(Bangalore)ನ್ನು ಬೆಂಗಳೂರು(Bengalooru) ಎಂದು ಬದಲಾಯಿಸುವಂತೆ ಧರ್ಮಸಿಂಗ್‌ ಸರ್ಕಾರಕ್ಕೆ ಸೂಚಿಸಿತ್ತು. ಸರ್ಕಾರ ಬದಲಾಗಿದೆ. ಹೀಗಾಗಿ ಈ ವಿಚಾರ ಮೂಲಗೆ ಬಿದ್ದಿದೆ. ಅಸೋಮ್‌ ಸರ್ಕಾರದ ಕ್ರಮ, ಕರ್ನಾಟಕ ಸರ್ಕಾರಕ್ಕೂ ಸ್ಫೂರ್ತಿ ನೀಡೀತೇ...?

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X