ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಮುಕ್ತ ವಿವಿ ಪರೀಕ್ಷೆ : ವಿವಿಧ ಕಾಲೇಜುಗಳು ಸಿದ್ಧ

By Staff
|
Google Oneindia Kannada News

ಕರ್ನಾಟಕ ಮುಕ್ತ ವಿವಿ ಪರೀಕ್ಷೆ : ವಿವಿಧ ಕಾಲೇಜುಗಳು ಸಿದ್ಧ
ವಿವಿ ಪುರಂ ಕಾಲೇಜಲ್ಲಿ ಪರೀಕ್ಷೆ, ಸೋಮವಾರದಿಂದ ಸಿದ್ಧತಾ ತರಗತಿ...

ಬೆಂಗಳೂರು : ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಮಾರ್ಚ್‌ 5ರಂದು ನಗರದ ವಿವಿ ಪುರಂ ಕಾಲೇಜಿನಲ್ಲಿ ನಡೆಯಲಿದೆ.

ಪ್ರಥಮ ಬಿ.ಎ., ಬಿ.ಕಾಂ., ಎಂ.ಎ., ಎಂ.ಕಾಂ., ಪ್ರವೇಶಾರ್ಥಿಗಳಿಗೆ ಈ ಪರೀಕ್ಷೆ ನಡೆಯುತ್ತಿದೆ.

ಬೆಳಗ್ಗೆ 10ರಿಂದ 12.30ರವರೆಗೆ ಬಿ.ಪಿ.ಪಿ ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ಎಂ.ಪಿ.ಪಿ. ಪರೀಕ್ಷೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಎಂ.ಎ ಇಂಗ್ಲಿಷ್‌ನ ಎಂ.ಪಿ.ಪಿ ಪೂರ್ವ ಸಿದ್ಧತಾ ತರಗತಿಗಳು ಫೆ 25ರಿಂದ 26ರವರೆಗೆ ಅಬ್ಬಾಸ್‌ ಖಾನ್‌ ಮಹಿಳಾ ಕಾಲೇಜು, ಫೆ 27ರಿಂದ ಮಾರ್ಚ್‌1ರವರೆಗೆ ಬಿಎ ಗೆ ಬಿಪಿಪಿ ತರಗತಿಗಳು ರಾಜಾಜಿನಗರದ ಆರ್‌ಪಿಎ ಕಾಲೇಜಿನಲ್ಲಿ ನಡೆಯಲಿದೆ.

ಫೆ27ರಿಂದ ಮಾರ್ಚ್‌1ರವರೆಗೆ ಬಿಕಾಂ ಗೆ ವಿವಿ ಪುರಂ ಕಾಲೇಜಿನಲ್ಲಿ ತರಗತಿಗಳನ್ನು ಏರ್ಪಡಿಸಲಾಗಿದ್ದು, ಮಾರ್ಚ್‌3ಮತ್ತು 4ರಂದು ಎಂ.ಎ.ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ವಿಷಯಗಳಿಗೆ ಕೆ.ಆರ್‌.ರಸ್ತೆಯ ವಿವಿಪುರಂ ಕಾಲೇಜಿನಲ್ಲಿ ತರಗತಿಗಳನ್ನು ಆಯೋಜಿಸಲಾಗಿದೆ. ಮಾಹಿತಿಗಾಗಿ 26606860, 26603664

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X