ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ರೈಲಿಗೆ ಮನಸೋತ ಮುಖ್ಯಮಂತ್ರಿ ಎಚ್‌ಡಿಕೆ

By Staff
|
Google Oneindia Kannada News

ಮೆಟ್ರೋ ರೈಲಿಗೆ ಮನಸೋತ ಮುಖ್ಯಮಂತ್ರಿ ಎಚ್‌ಡಿಕೆ
ಸಮರ್ಪಕ ಪರ್ಯಾಯ ಸಾರಿಗೆ ಅಗತ್ಯ, ಮೆಟ್ರೋ ರೈಲಿಗೆ ವಿರೋಧವಿಲ್ಲ...

ನವದೆಹಲಿ : ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೆಟ್ರೋ ರೈಲಿಗೆ ಮನಸೋತಿದ್ದು, ಬೆಂಗಳೂರು ಸಂಚಾರ ಸಮಸ್ಯೆಗೆ ಮೆಟ್ರೋ ರೈಲು ಉತ್ತಮ ಪರ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಮೆಟ್ರೋ ರೈಲಿನಲ್ಲಿ ಪತ್ನಿ ಅನಿತಾ ಸಮೇತ ಪ್ರಯಾಣ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ರೈಲು ಪ್ರಯಾಣ ಮುಗಿದ ನಂತರ ಸಂದರ್ಶಕರ ಪುಸ್ತಕದಲ್ಲಿ ‘ಬೆಂಗಳೂರು ನಗರದ ಜನತೆ ಎದುರಿಸುತ್ತಿರುವ ಸಂಚಾರ ಸಮಸ್ಯೆಗೆ ಮೆಟ್ರೋ ರೈಲು ಉತ್ತಮ ಪರ್ಯಾಯ’ ಎಂದು ಬರೆದರು.

ಇದೇ ಲಹರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆಗೆ ಉಪಯುಕ್ತವಾದುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮೆಟ್ರೋ ರೈಲಿಗೆ ನನ್ನ ವಿರೋಧವೇನಿಲ್ಲ. ಮೆಟ್ರೋ ರೈಲು ಮತ್ತು ಮೋನೋ ರೈಲುಗಳ ನಡುವೆ ವಿವಾದವಿಲ್ಲ. ಮೆಟ್ರೋ ರೈಲಿನ ಜೊತೆಯಲ್ಲಿ ಮೋನೋ ರೈಲನ್ನೂ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ನಗರಕ್ಕೆ ಸಮರ್ಪಕ ಪರ್ಯಾಯ ಸಾರಿಗೆ ವ್ಯವಸ್ಥೆ ಬೇಕಿದೆ. ರಾಜ್ಯದಲ್ಲಿ ಬಂಡವಾಳ ಹೂಡುವವರೂ ಇದನ್ನೇ ಬಯಸುತ್ತಿದ್ದಾರೆ. ಹಾಗಾಗಿ ಸರ್ಕಾರ ಈ ವಿಷಯದಲ್ಲಿ ವಿಳಂಬ ಮಾಡಲಾರದು ಎಂದು ಸ್ಪಷ್ಟಪಡಿಸಿದರು.

ಕೃಷಿ ಸಚಿವ ಬಂಡೆಪ್ಪ ಕಾಶಂಪುರ, ದೆಹಲಿ ಮೆಟ್ರೋ ಆಡಳಿತ ನಿರ್ದೇಶಕ ಶ್ರೀಧರನ್‌, ಬೆಂಗಳೂರು ಮೆಟ್ರೋ ರೈಲು ನಿಗಮದ ಆಡಳಿತ ನಿರ್ದೇಶಕ ಕೆ.ಎನ್‌.ಶ್ರೀವಾಸ್ತವ ಮೊದಲಾದವರು ಕುಮಾರಸ್ವಾಮಿ ಅವರೊಂದಿಗೆ ರೈಲು ಪ್ರಯಾಣದಲ್ಲಿ ಪಾಲ್ಗೊಂಡರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X