ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿ ಜ್ವರದ ಕಾವು : ಮೊಟ್ಟೆ-ಮಾಂಸ ಕೇಳೋರಿಲ್ಲ!

By Staff
|
Google Oneindia Kannada News

ಕೋಳಿ ಜ್ವರದ ಕಾವು : ಮೊಟ್ಟೆ-ಮಾಂಸ ಕೇಳೋರಿಲ್ಲ!
ಬಾತುಕೋಳಿ ಮಾರಾಟದಲ್ಲೂ ಹಿನ್ನಡೆ, ಶೇ.50ರಿಂದ 75ರಷ್ಟು ಮಾರಾಟ ಕುಸಿತ...

ಬೆಂಗಳೂರು : ದೇಶಾದ್ಯಂತ ಕೋಳಿ ಜ್ವರದ ಭೀತಿ ಹರಡಿರುವ ಕಾರಣ, ಉದ್ಯಾನನಗರಿಯಲ್ಲೂ ಕೋಳಿ ಮಾಂಸ ಮತ್ತು ಮೊಟ್ಟೆ ವ್ಯಾಪಾರ ಕುಸಿದಿದ್ದು, ಸರಕು ಮಾರಾಟ ಮಾಡಲು ವ್ಯಾಪಾರಿಗಳು ಪರದಾಡುವಂತಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 16,000 ಸಾವಿರ ಕೋಳಿಗಳು ಸತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಕಾರಣ, ಕೋಳಿ ಮಾಂಸ ಮತ್ತು ಮೊಟ್ಟೆ ಬಳಕೆಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಹಾಗಾಗಿ ಕುಕ್ಕುಟ ಉದ್ಯಮ ಭಾರೀ ನಷ್ಟಕ್ಕೀಡಾಗಿದೆ.

ಮಾಂಸ ಮಾರಾಟದಲ್ಲಿ ಶೇಕಡಾ 75ರಷ್ಟು ಹಾಗೂ ಮೊಟ್ಟೆ ಮಾರಾಟದಲ್ಲಿ ಶೇಕಡಾ 50ರಷ್ಟು ಕುಸಿತ ಕಂಡುಬಂದಿದೆ. ಕಿಲೋಗೆ 35 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದ್ದ ಮಾಂಸ, 20-22ರೂಪಾಯಿಗೆ ಕುಸಿದಿದೆ. ಪ್ರತಿ ದಿನ 20ಲಕ್ಷಕ್ಕೂ ಅಧಿಕ ಮೊಟ್ಟೆಗಳು ಮಾರಾಟವಾಗದೇ ಉಳಿಯುತ್ತಿವೆ. ಬಾತುಕೋಳಿ ಮೊದಲಾದ ಪಕ್ಷಿಗಳ ಮಾರಾಟಕ್ಕೂ ಭಾರೀ ಹೊಡೆತ ಬಿದ್ದಿದೆ. ಆದರೆ, ಮೊಟ್ಟೆ ಬೆಲೆಯಲ್ಲಿ ಇಳಿಕೆಯಾಗಿಲ್ಲ.

ಪಶುಸಂಗೋಪನಾ ಸಚಿವ ವಿ.ಎಸ್‌.ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈಗ ದೊರೆತಿರುವ ವರದಿಗಳ ಪ್ರಕಾರ, ಶಿವಮೊಗ್ಗದಲ್ಲಿ ಸತ್ತ ಕೋಳಿಗಳಿಗೆ ಕೋಳಿ ಜ್ವರದ ಸೋಂಕಿರಲಿಲ್ಲ. ಹೆಚ್ಚಿನ ಮಾಹಿತಿಗಾಗಿ, ಮಾದರಿಗಳನ್ನು ಭೋಪಾಲ್‌ನಲ್ಲಿರುವ ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿದೆ. ಶೀಘ್ರವೇ ಈ ವರದಿ ದೊರೆಯಲಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಕೋಳಿಜ್ವರ ದೂರದ ಪ್ರದೇಶಗಳಿಂದ ಹರಡುವುದಿಲ್ಲ. ಹಾಗಾಗಿ ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X