ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಅನಂತಕುಮಾರ್‌ರಿಂದ ಕನ್ನಡ ಕೂಗು

By Staff
|
Google Oneindia Kannada News

ಲೋಕಸಭೆಯಲ್ಲಿ ಅನಂತಕುಮಾರ್‌ರಿಂದ ಕನ್ನಡ ಕೂಗು
ಸಂಸತ್ತಿನ ತುಂಬ ಮಾತೃಭಾಷೆ ಕಲರವ, ತ್ಯಾಗಬಲಿದಾನಗಳ ಸ್ಮರಣೆ...

ನವದೆಹಲಿ : ಏಳು ಜ್ಞಾನಪೀಠಗಳ ಗೌರವಕ್ಕೆ ಪಾತ್ರವಾಗಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಬೇಕೆಂದು ಸಂಸದ ಅನಂತ್‌ಕುಮಾರ್‌ ಕನ್ನಡದಲ್ಲೇ ಮಾತನಾಡಿ ಲೋಕಸಭೆಯಲ್ಲಿ ಆಗ್ರಹಿಸಿದರು.

ಮಾತೃಭಾಷಾ ದಿನಾಚರಣೆಯ ಸಂದರ್ಭ ಬಳಸಿಕೊಂಡು ಅವರು ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದರು.

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಕೇವಲ ಕರ್ನಾಟಕಕ್ಕೆ ಸೀಮಿತವಾದುದಲ್ಲ. ಅದು ಭೌಗೋಳಿಕ ಗಡಿಯನ್ನು ಮೀರಿ ಬೆಳೆದ ಭಾಷೆ. ಸಮೃದ್ಧ ಸಾಹಿತ್ಯ-ಪರಂಪರೆ ಹೊಂದಿರುವ ಕನ್ನಡಕ್ಕೆ ಅಭಿಜಾತ ಭಾಷೆ(ಶಾಸ್ತ್ರೀಯ ಭಾಷೆ) ಸ್ಥಾನಮಾನ ಕಲ್ಪಿಸಬೇಕೆಂದು ಒತ್ತಾಯ ಮಾಡಿದರು.

ಲೋಕಸಭಾಧ್ಯಕ್ಷ ಸೋಮನಾಥ್‌ ಚಟರ್ಜಿ ತಮ್ಮ ಮಾತೃಭಾಷೆ ಬಂಗಾಳಿಯಲ್ಲಿ ಮಾತನಾಡುವ ಮೂಲಕ, ಸಂಸತ್ತಿನ ತುಂಬ ಮಾತೃಭಾಷೆಗಳ ಕಲರವ ಕೇಳಿಬರಲು ಕಾರಣವಾದರು.

ಸುಮಾರು 15ಕ್ಕೂ ಅಧಿಕ ಭಾಷೆಗಳಲ್ಲಿ ಮಾತನಾಡಿದ ಸಂಸದರು, ಮಾತೃಭಾಷೆಯ ಹಿರಿಮೆ-ಗರಿಮೆ ಹಾಗೂ ಅದರ ಉಳಿಯುವಿಕೆಗಾಗಿ ನಡೆದ ತ್ಯಾಗಬಲಿದಾನಗಳನ್ನು ಸ್ಮರಿಸಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X