ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.25 : ಆಲೂರು ವೆಂಕಟರಾಯರ ಬಗ್ಗೆ ವಿಶೇಷ ಉಪನ್ಯಾಸ

By Staff
|
Google Oneindia Kannada News

ಫೆ.25 : ಆಲೂರು ವೆಂಕಟರಾಯರ ಬಗ್ಗೆ ವಿಶೇಷ ಉಪನ್ಯಾಸ
ಬನವಾಸಿ ಬಳಗದಿಂದ ಆಲೂರು ವೆಂಕಟರಾಯರ ಸ್ಮರಣೆ, ಖ್ಯಾತನಾಮರಿಂದ ಉಪನ್ಯಾಸ.

ಬೆಂಗಳೂರು : ಬನವಾಸಿ ಬಳಗ ಫೆಬ್ರವರಿ 25ರಂದು ಆಲೂರ ವೆಂಕಟರಾಯರ ಪುಣ್ಯತಿಥಿಯ ಹಿನ್ನೆಲೆ, ವಿವಿಧ ಉಪನ್ಯಾಸಗಳನ್ನು ಏರ್ಪಡಿಸಿದೆ.

ಸದ್ದಿಲ್ಲದ ಸೂರ್ಯನಂತೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಸರ್ವಾಂಗೀಣ ಉದ್ಧಾರಕ್ಕಾಗಿ ಹೋರಾಡಿದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರನ್ನು ನೆನೆಯುವ ಕಾರ್ಯಕ್ರಮ ಇದಾಗಿದ್ದು, ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬನವಾಸಿ ಬಳಗ ಕೋರಿದೆ.

ಕಾರ್ಯಕ್ರಮದ ವಿವರ :

Alura Venkatarayaruಉಪನ್ಯಾಸ-1 : ‘ಆಲೂರರ ಕರ್ನಾಟಕತ್ವ ಹಾಗೂ ಏಕೀಕರಣಕ್ಕೆ ಸಂಬಂಧಿಸಿದ ಕೆಲಸ’
ಉಪನ್ಯಾಸಕರು : ಸೂರ್ಯನಾಥ ಕಾಮತ್‌, ಖ್ಯಾತ ಇತಿಹಾಸಕಾರರು, ಬರಹಗಾರರು ಹಾಗೂ ಸಂಶೋಧಕರು

ಉಪನ್ಯಾಸ-2 : ‘ಕರ್ನಾಟಕತ್ವ ಹಾಗೂ ಏಕೀಕರಣದ ಕೆಲಸಕ್ಕೆ ಆಧ್ಯಾತ್ಮಿಕ ಸಮರ್ಥನೆ’
ಉಪನ್ಯಾಸಕರು : ಶತಾವಧಾನಿ ಡಾ : ರಾ. ಗಣೇಶ, ಪ್ರಸಿದ್ಧ ಗಮಕ ವಿದ್ವಾಂಸರು

ಉಪನ್ಯಾಸ-3 : ‘ಆಲೂರರ ಕೆಲಸವನ್ನು ಮುಂದುವರಿಸಿಕೊಂಡುಹೋಗುವ ಬಗೆ’
ಉಪನ್ಯಾಸಕರು : ಚ.ಸು. ಯೋಗಾನಂದ, ಖ್ಯಾತ ಗಣಿತಜ್ಞರು ಹಾಗೂ ಸಮಾಜಸೇವಕರು.

ಕಾರ್ಯಕ್ರಮ ನಡೆಯುವ ಸ್ಥಳ :

ಗೋಖಲೆ ಸಾರ್ವಜನಿಕ ಸಂಸ್ಥೆ, ಬಸವನಗುಡಿ ರಸ್ತೆ, ನರಸಿಂಹರಾಜ ಕಾಲನಿ, ಬೆಂಗಳೂರು- 19.

ದಿನಾಂಕ ಮತ್ತು ಸಮಯ :

25 ಫೆಬ್ರವರಿ 2006, ಬೆಳಗ್ಗೆ 9.30 - ಮಧ್ಯಾಹ್ನ 12.30ರವರೆಗೆ

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :

ಬಾ.ರಾ. ಕಿರಣ (ದೂರವಾಣಿ : 98454-66738), ಆನಂದ ಜೋಶಿ (ದೂರವಾಣಿ : 94485-32582), ಸಂಪಿಗೆ ಶ್ರೀನಿವಾಸ (ದೂರವಾಣಿ : 98808-62180).

(ದಟ್ಸ್‌ ಕನ್ನಡ ವಾರ್ತೆ)

ಪೂರಕ ಓದಿಗೆ-
ಕನ್ನಡ ಕುಲ ಪುರೋಹಿತ - ಆಲೂರ ವೆಂಕಟರಾಯರು

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X