ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೌಡಿ ಪಡೆಗಳ ಮಧ್ಯೆ ಡಿಶುಂ ಡಿಶುಂ : ಪಳನಿ ಫಿನಿಷ್‌!

By Staff
|
Google Oneindia Kannada News

ರೌಡಿ ಪಡೆಗಳ ಮಧ್ಯೆ ಡಿಶುಂ ಡಿಶುಂ : ಪಳನಿ ಫಿನಿಷ್‌!
ನಗರದ ಆಸ್ಪತ್ರೆಯಲ್ಲಿ ಸಿನಿಮೀಯ ಹತ್ಯೆ, ರೌಡಿಗಳ ಬಡಿದಾಟ

ಬೆಂಗಳೂರು : ನಗರದ ಹಲಸೂರಿನ ಹಾಸ್‌ಮ್ಯಾಟ್‌ ಆಸ್ಪತ್ರೆಯಲ್ಲಿ ಸಿನಿಮೀಯ ರೀತಿಯಲ್ಲಿ ರೌಡಿಗಳು ಬಡಿದಾಡಿದ್ದು, ಈ ಘಟನೆಯಲ್ಲಿ ರೌಡಿ ಪಳನಿ ಕೊಲೆಗೀಡಾಗಿದ್ದಾನೆ.

ಆಟೋ ಅಪಘಾತದಲ್ಲಿ ಗಾಯಗೊಂಡು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶೋಕ ನಗರ, ವಿವೇಕನಗರ ಪ್ರದೇಶಗಳ ರೌಡಿ ಪಳನಿ ಮೇಲೆ 30ಮಂದಿ ದಾಳಿ ಮಾಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಪಳನಿ, ಮಂಚದ ಕೆಳಗೆ ತೂರಿದಾಗ ಎರಡೂ ಕಡೆಯಿಂದ ಲಾಂಗ್‌ಗಳಿಂದ ಎದುರಾಳಿ ಪಡೆ ಹಲ್ಲೆ ಮಾಡಿದೆ.

ಪಳನಿಯನ್ನು ಕಾಯುತ್ತಿದ್ದ ಆತನ ಸಹಚರರು ಪ್ರತಿದಾಳಿ ಮಾಡಿದಾಗ ಘರ್ಷಣೆ ಸಂಭವಿಸಿದೆ. ಕತ್ತಿ, ಲಾಂಗ್‌, ಮಚ್ಚು, ಚೂರಿಗಳು ಆಸ್ಪತ್ರೆಯಲ್ಲಿ ರಕ್ತಕಾರಿವೆ. ಈ ಪ್ರಕರಣದಲ್ಲಿ ಪಳನಿಯ ಸಹಚರ ಮುರುಗನ್‌ ಮತ್ತು ಪ್ರತಾಪ್‌ ತೀವ್ರವಾಗಿ ಗಾಯಗೊಂಡಿದ್ದಾರೆ.

ಬೆದರಿಕೆ, ಕಳ್ಳತನ, ಸುಲಿಗೆ ಸೇರಿದಂತೆ ಪಳನಿ ವಿರುದ್ಧ 27 ಕ್ರಿಮಿನಲ್‌ ಪ್ರಕರಣಗಳು ಈ ಹಿಂದೆ ದಾಖಲಾಗಿದ್ದವು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X