ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಫೆ.28ರಂದು ಕೇಂದ್ರ ಬಜೆಟ್‌ ಮಂಡನೆ

By Staff
|
Google Oneindia Kannada News

ಸಂಸತ್ತಿನಲ್ಲಿ ಫೆ.28ರಂದು ಕೇಂದ್ರ ಬಜೆಟ್‌ ಮಂಡನೆ
ಕಲಾಂ ಭಾಷಣ : ಸಂಸತ್‌ ಬಜೆಟ್‌ ಅಧಿವೇಶನ ಆರಂಭ, ಸರ್ಕಾರಕ್ಕೆ ಅಗ್ನಿ ಪರೀಕ್ಷೆ

ನವದೆಹಲಿ : ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವುದರೊಂದಿಗೆ, ಪ್ರಸಕ್ತ ಸಾಲಿನ ಕೇಂದ್ರೀಯ ಬಜೆಟ್‌ ಅಧಿವೇಶನ ಗುರುವಾರ ಆರಂಭಗೊಂಡಿತು.

ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ಮಾತನಾಡುತ್ತ, ದೇಶದ ಆರ್ಥಿಕ ವ್ಯವಸ್ಥೆ ಮುನ್ನಡೆಯುತ್ತಿದ್ದು, ಜನತೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು.

ಉದ್ಯೋಗ ಖಾತರಿ ಯೋಜನೆ, ಭಾರತ ನಿರ್ಮಾಣ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಗ್ರಾಮೀಣ ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದೆ. ದೆಹಲಿ ಮೆಟ್ರೋ ಯೋಜನೆಯಂತಹ ನಗರಾಭಿವೃದ್ಧಿ ಯೋಜನೆಗಳೂ ನಡೆಯುತ್ತಿವೆ. ಸುರಕ್ಷಿತ ಕುಡಿಯುವ ನೀರು, ಸರ್ವರಿಗೂ ಶಿಕ್ಷಣ ಹಾಗೂ ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.

ಪ್ರತಿಪಕ್ಷದ ದಾಳಿ : ಈ ಬಜೆಟ್‌ ಅಧಿವೇಶನ ಸರ್ಕಾರದ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ. ವಿರೋಧ ಪಕ್ಷ ಬಿಜೆಪಿ ದಾಳಿಯನ್ನಲ್ಲದೆ, ಮಿತ್ರಪಕ್ಷಗಳಾದ ಎಡಪಕ್ಷಗಳ (ಕಮ್ಯೂನಿಸ್ಟ್‌ ) ದಾಳಿಯನ್ನೂ ಪ್ರಧಾನಿ ಮನಮೋಹನ್‌ ಸಿಂಗ್‌ ಸರ್ಕಾರ ಎದುರಿಸಬೇಕಿದೆ.

ಭಾರತೀಯ ಟೆಲಿಗ್ರಾಫ್‌ ಮಸೂದೆ(ತಿದ್ದುಪಡಿ), ಭಾರತೀಯ ಅಂಚೆ ಕಚೇರಿ ಮಸೂದೆ(ತಿದ್ದುಪಡಿ), ಹಣಕಾಸು ಮಸೂದೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರೆಗ್ಯುಲೇಟರಿ ಮಂಡಳಿ ಮಸೂದೆ ಮೊದಲಾದವುಗಳು ಈ ಅಧಿವೇಶನದಲ್ಲಿ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ.

ಎಂದು ಬಜೆಟ್‌? : ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್‌ ಯಾದವ್‌ ಫೆ.24ರಂದು 2006-07ನೇ ಸಾಲಿನ ರೈಲ್ವೆ ಮುಂಗಡಪತ್ರವನ್ನು ಮಂಡಿಸುವರು. ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರ ಆಯವ್ಯಯಪತ್ರವನ್ನು ಫೆ.28ರಂದು ಸಂಸತ್ತಿನಲ್ಲಿ ಮಂಡಿಸುವರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X