ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರದಿಂದ ಬಿಎಂಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ

By Staff
|
Google Oneindia Kannada News

ಶುಕ್ರವಾರದಿಂದ ಬಿಎಂಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ
ಆರ್ಟ್‌ ಆಫ್‌ ಲೀವಿಂಗ್‌ನ ರಜತ ಮಹೋತ್ಸವಕ್ಕೆ 2500 ಬಸ್‌ಗಳ ಬಳಕೆ

ಬೆಂಗಳೂರು : ಶುಕ್ರವಾರದಿಂದ ಮುಂದಿನ ಮೂರು ದಿನಗಳ ಕಾಲ ನಗರದಲ್ಲಿ, ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ತೀವ್ರ ವ್ಯತ್ಯಯ ಕಂಡುಬರಲಿದೆ.

ನಗರದ ಜಕ್ಕೂರು ವಿಮಾನ ನಿಲ್ದಾಣದ ಆವರಣದಲ್ಲಿ ಫೆ.17ರಿಂದ ರವಿಶಂಕರ್‌ ಗುರೂಜಿ ಸಾರಥ್ಯದ ಆರ್ಟ್‌ ಆಫ್‌ ಲೀವಿಂಗ್‌ನ ರಜತ ಮಹೋತ್ಸವ ಆರಂಭಗೊಳ್ಳುತ್ತಿದೆ. ಈ ಸಮಾರಂಭಕ್ಕಾಗಿ ಬಿಎಂಟಿಸಿಯ 1200ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಸಂಚಾರ ವ್ಯತ್ಯಾಯ ಉಂಟಾಗಲಿದೆ.

ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಕ್ತರು ಮತ್ತು ಪ್ರವಾಸಿಗಳಿಗೆ ಅನುಕೂಲ ಕಲ್ಪಿಸಲು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಯ 2500 ಬಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಈ ಎರಡು ಸಂಸ್ಥೆಗಳಿಗೆ ಬಾಡಿಗೆ ರೂಪದಲ್ಲಿ ನಾಲ್ಕು ಕೋಟಿ ರೂ. ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X