ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಮನ್ಸ್‌ ಅತೃಪ್ತಿ : ಐಟಿ ನಗರಕ್ಕೆ ಇನ್ನೊಂದು ಗಾಯ

By Staff
|
Google Oneindia Kannada News

ಸೀಮನ್ಸ್‌ ಅತೃಪ್ತಿ : ಐಟಿ ನಗರಕ್ಕೆ ಇನ್ನೊಂದು ಗಾಯ
ಬೆಂಗಳೂರಿನಲ್ಲಿ ಮೂಲಸೌಕರ್ಯಗಳ ಕೊರತೆ... ಗುಜರಾತ್‌ನಲ್ಲಿ ಸೀಮನ್ಸ್‌ನ ಹೊಸ ಯೋಜನೆ...

ಬೆಂಗಳೂರು : ನಗರದಲ್ಲಿನ ಮೌಲಸೌಕರ್ಯಗಳ ಕೊರತೆ ಮತ್ತೆ ಬಯಲಿಗೆ ಬಂದಿದೆ. ಈ ನೆಪವನ್ನು ಮುಂದಿಟ್ಟುಕೊಂಡು, ಎಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದನಾ ಕಂಪನಿ ಸೀಮನ್ಸ್‌ ಬೆಂಗಳೂರಿನಲ್ಲಿ ತನ್ನ ವಿಸ್ತರಣಾ ಯೋಜನೆಯನ್ನು ಕೈಬಿಟ್ಟಿದೆ.

ಫ್ಯಾಬ್‌ ಸಿಟಿಯಿಂದ ವಂಚಿತವಾಗಿದ್ದ ರಾಜಧಾನಿ ನಗರಕ್ಕೆ ಇದು ಇನ್ನೊಂದು ಬರೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಮಂಕಾಗಿದೆ.

ಸೀಮನ್ಸ್‌ ಕಂಪನಿಯ ಭಾರತೀಯ ಶಾಖೆಗೆ 50ವರ್ಷ ತುಂಬಿದ ಹಿನ್ನೆಲೆ ಹೊಸ ಯೋಜನೆ ಪ್ರಕಟಿಸುವ ಸಾಧ್ಯತೆಗಳಿದ್ದವು. ಆದರೆ ನಗರದ ಮೂಲ ಸೌಕರ್ಯಗಳ ಕೊರತೆ ಹಿನ್ನೆಲೆ ಕಂಪನಿ, ಹಿಂದೆ ಸರಿದಿದೆ.

ಜರ್ಮನಿ ಮೂಲದ ಸೀಮನ್ಸ್‌ ಕಂಪನಿ ಕೈಗಾರಿಕೆ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ಸಾರಿಗೆ ಮತ್ತಿತರ ಕ್ಷೇತ್ರಗಳಿಗೆ ಉಪಕರಣ ಒದಗಿಸುತ್ತಿದೆ. ಗುಜರಾತ್‌ನ ವಡೋರದಲ್ಲಿ ಒಂದು ಗ್ರೀನ್‌ ಫೀಲ್ಡ್‌ ಸ್ಟೀಂ ಟರ್ಬೈನ್‌ ಕಾರ್ಖಾನೆಯನ್ನು 30ಕೋಟಿ ವೆಚ್ಚದಲ್ಲಿ ಆರಂಭಿಸುವುದಾಗಿ ಸೀಮನ್ಸ್‌ ಹೇಳಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X