ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿ.ವಿ.ಕುಲಪತಿಯಾಗಿ ವಿಜ್ಞಾನಿ ಯು.ಆರ್‌.ರಾವ್‌ ನೇಮಕ

By Staff
|
Google Oneindia Kannada News

ವಿ.ವಿ.ಕುಲಪತಿಯಾಗಿ ವಿಜ್ಞಾನಿ ಯು.ಆರ್‌.ರಾವ್‌ ನೇಮಕ
ಇಸ್ರೋ ಮಾಜಿ ಅಧ್ಯಕ್ಷ, ಹೆಮ್ಮೆಯ ಕನ್ನಡಿಗನಿಗೆ ಮಹತ್ವದ ಹೊಣೆ

ಬೆಂಗಳೂರು : ಉತ್ತರ ಪ್ರದೇಶದ ಲಕ್ನೋದಲ್ಲಿರುವ ಡಾ.ಅಂಬೇಡ್ಕರ್‌ ವಿಶ್ವವಿದ್ಯಾಲಯದ ಕುಲಪತಿಯಾಗಿ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಮಾಜಿ ಅಧ್ಯಕ್ಷ ಮತ್ತು ಕನ್ನಡಿಗ ಯು.ಆರ್‌.ರಾವ್‌ ನೇಮಕಗೊಂಡಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದ್ದು, ಅವರು ಮುಂದಿನ ಐದು ವರ್ಷಗಳ ಕಾಲ ವಿ.ವಿ.ಕುಲಪತಿಯಾಗಿ ಕಾರ್ಯನಿರ್ವಹಿಸುವರು.

ರಾಷ್ಟ್ರದ ಮೊದಲ ಉಪಗ್ರಹ ಆರ್ಯಭಟದ ಉಡಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಯು.ಆರ್‌.ರಾವ್‌, ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಯು.ಆರ್‌.ರಾವ್‌ ರಾಷ್ಟ್ರದ ಹೆಮ್ಮೆಯ ವಿಜ್ಞಾನಿಗಳಲ್ಲಿ ಒಬ್ಬರು.

ಸೇವೆ : ಅಂಬೇಡ್ಕರ್‌ ವಿ.ವಿ.ಯಲ್ಲಿ ಸಂದರ್ಶಕ ಉಪನ್ಯಾಸಕರಾಗಿ ರಾಷ್ಟ್ರಪತಿ ಎ.ಪಿ.ಜೆ. ಕಲಾಂ ಸೇವೆ ಸಲ್ಲಿಸುತ್ತಿದ್ದಾರೆ. ಯು.ಆರ್‌.ರಾವ್‌ ನೇಮಕದಿಂದ, ವಿ.ವಿ.ಪ್ರತಿಷ್ಠೆ ಇನ್ನಷ್ಟು ಹೆಚ್ಚಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X