ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ಭಕ್ತರ ಮಧ್ಯೆ ಬಾಹುಬಲಿಗೆ ಮಹಾಮಜ್ಜನ

By Staff
|
Google Oneindia Kannada News

ಲಕ್ಷಾಂತರ ಭಕ್ತರ ಮಧ್ಯೆ ಬಾಹುಬಲಿಗೆ ಮಹಾಮಜ್ಜನ
ಫೆ.19ರವರೆಗೆ ಮಹಾ ಅಭಿಷೇಕ, ಶ್ರವಣಬೆಳಗೊಳದಲ್ಲಿ ಸಾರ್ಥಕ ಸಂಭ್ರಮ

ಶ್ರವಣಬೆಳಗೊಳ : ಶತಮಾನದ ಮೊದಲ ಮಹಾಮಸ್ತಾಕಾಭಿಷೇಕ ಪ್ರಕ್ರಿಯೆ, ಬುಧವಾರ ಬೆಳಗ್ಗೆಯಿಂದಲೇ ಆರಂಭಗೊಂಡಿದೆ.

ಭಗವಾನ್‌ ಬಾಹುಬಲಿಗೆ ಇಂದು ಮಹಾಮಜ್ಜನದ ಸಂಭ್ರಮ. ಈ ಸುಸಂದರ್ಭಕ್ಕೆ ಸಾಕ್ಷಿಯಾಗಲು ಲಕ್ಷಾಂತರ ಮಂದಿ ಭಕ್ತರು ಹಾಗೂ ಪ್ರವಾಸಿಗರು ಶ್ರವಣಬೆಳಗೊಳದಲ್ಲಿ ಕಿಕ್ಕಿರಿದಿದ್ದಾರೆ.

ಪುಟ್ಟ ಊರು ಶ್ರವಣಬೆಳಗೊಳ ಜನಜಂಗುಳಿಯಿಂದ ತುಂಬಿ ಹೋಗಿದ್ದು, ಎಲ್ಲೆಡೆ ಸಾರ್ಥಕ್ಯದ ವಾತಾವರಣ. ಎಳನೀರು, ಕಬ್ಬಿನ ಹಾಲು, ಶ್ವೇತಕಲ್ಕಚೂರ್ಣ, ಶ್ರೀಗಂಧ, ಅಷ್ಟಗಂಧ, ಕೇಸರಿ ಸೇರಿದಂತೆ ನಾನಾ ಅಭಿಷೇಕಗಳು ಆರಂಭಗೊಂಡಿದ್ದು, ಬಾಹುಬಲಿಯನ್ನು ಮತ್ತಷ್ಟು ಮಂದಸ್ಮಿತಗೊಳಿಸುತ್ತಿದೆ.

ಬಾಹುಬಲಿಗೆ ಮಜ್ಜನ ಕಾರ್ಯಕ್ರಮದಲ್ಲಿ, ವಿಶ್ವದ ವಿವಿಧ ಮೂಲೆಗಳಿಂದ ತರಿಸಲಾಗಿರುವ ಶ್ರೇಷ್ಠ ಹೂವುಗಳನ್ನು ಬಳಸಲಾಗುತ್ತಿದೆ.

ಚಂದನ, ಈಟಿವಿ, ಉದಯ, ಸಂಸ್ಕಾರ್‌ ವಾಹಿನಿಗಳು ನೇರ ಪ್ರಸಾರದ ಮೂಲಕ, ಬಾಹುಬಲಿ ಮಸ್ತಾಕಾಭಿಷೇಕವನ್ನು ಮನೆಯ ಅಂಗಳಕ್ಕೆ ತಂದಿವೆ. ಫೆ.19ರವರೆಗೆ ಮಹಾ ಅಭಿಷೇಕ ಕಾರ್ಯಕ್ರಮ ಜರುಗಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X