ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ದಾಖಲೆ : ಆಗಸದೆತ್ತರಕ್ಕೆ ಸೆನ್ಸೆಕ್ಸ್‌ ಲಗ್ಗೆ

By Staff
|
Google Oneindia Kannada News

ಮತ್ತೊಂದು ದಾಖಲೆ : ಆಗಸದೆತ್ತರಕ್ಕೆ ಸೆನ್ಸೆಕ್ಸ್‌ ಲಗ್ಗೆ
ಹೆಚ್ಚಿದ ವಿದೇಶಿ ಸಾಂಸ್ಥಿಕ ಹೂಡಿಕೆ, ಷೇರುಗಳ ಬೆಲೆಯಲ್ಲಿ ಹೆಚ್ಚಳ...

ಮುಂಬೈ : ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಸೋಮವಾರ ಪ್ರಥಮ ಬಾರಿಗೆ, 10 ಸಾವಿರ ಪಾಯಿಂಟ್‌ಗಳಷ್ಟು ಏರಿಕೆಯಾಗಿದ್ದು, ದಾಖಲೆಯನ್ನು ಸೃಷ್ಟಿಸಿದೆ.

ಸೆನ್ಸೆಕ್ಸ್‌ನ ನಿಫ್ಟಿ ಸೂಚ್ಯಂಕವು 3007.15ಕ್ಕೆ ತಲುಪಿದ್ದು, ಇದರಿಂದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೋಸಿಸ್‌, ಐಸಿಐಸಿಐ ಬ್ಯಾಂಕ್‌, ಎಸಿಸಿ, ಬಜಾಜ್‌ ಆಟೋ, ಎಚ್‌ಡಿಎಫ್‌ಸಿ ಮತ್ತು ಎಲ್‌ಆಡ್‌ ಟಿ ಸಂಸ್ಥೆಗಳಿಗೆ ಪ್ರೋತ್ಸಾಹ ದೊರೆತಿದೆ.

ಒಂದು ವರ್ಷದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಾಗಿ ತಮ್ಮ ಹಣವನ್ನು ಹೂಡಿದ ಹಿನ್ನೆಲೆಯಲ್ಲಿ ಉತ್ತಮ ದರ್ಜೆಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಇದರ ಪರಿಣಾಮ ಈ ಷೇರುಗಳ ಬೆಲೆ ಮೇಲೇರಿದೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳ ಪೈಕಿ, ಇನ್ಫೋಸಿಸ್‌ ಷೇರುಗಳ ಬೆಲೆ ರೂ.1876ರಿಂದ 2900ವರೆಗೆ, ವಿಪ್ರೋ ಷೇರುಗಳು ರೂ.286ರಿಂದ 529ರವರೆಗೆ ಇವೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X