ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸರ್ಕಾರಕ್ಕೆ ಅಂದದ ಹೆಸರಿಡಲು ಅನ್ವೇಷಣೆ

By Staff
|
Google Oneindia Kannada News

ಹೊಸ ಸರ್ಕಾರಕ್ಕೆ ಅಂದದ ಹೆಸರಿಡಲು ಅನ್ವೇಷಣೆ
ಕೇಂದ್ರದಲ್ಲಿ ಯುಪಿಎ, ರಾಜ್ಯದಲ್ಲಿ ಜೆಡಿಎಫ್‌? ಸದ್ಯದಲ್ಲಿಯೇ ಅಂತಿಮ ನಿರ್ಧಾರ

ಬೆಂಗಳೂರು : ಅಸ್ತಿತ್ವಕ್ಕೆ ಬರಲಿರುವ ನೂತನ ಸಮ್ಮಿಶ್ರ ಸರ್ಕಾರಕ್ಕೆ ಅಂದದ ಹೆಸರನ್ನು ನಾಮಕರಣ ಮಾಡಲು ಜೆಡಿಎಸ್‌ ಮತ್ತು ಬಿಜೆಪಿ ನಿರ್ಧರಿಸಿವೆ. ಹೆಸರಿನ ಅನ್ವೇಷಣೆ ಆರಂಭಗೊಂಡಿದೆ.

ಕೇಂದ್ರದಲ್ಲಿ ಆಡಳಿತ ನಡೆಸಿದ ಮೈತ್ರಿ ಸರ್ಕಾರಗಳು ಯುಪಿಎ ಮತ್ತು ಎನ್‌ಡಿಎ ಎಂದು ಗುರ್ತಿಸಿಕೊಂಡಿದ್ದವು. ಇದೇ ಮಾದರಿಯಲ್ಲಿ ಹೊಸ ಸರ್ಕಾರಕ್ಕೆ ಜನತಾ ಪ್ರಜಾಸತ್ತಾತ್ಮಕ ಒಕ್ಕೂಟ(ಜೆಡಿಎಫ್‌) ಎಂದು ನಾಮಕರಣ ಮಾಡುವ ಪ್ರಸ್ತಾವನೆ ನಮ್ಮ ಮುಂದಿದೆ. ಜನತಾದಳ ಮತ್ತು ಭಾರತೀಯ ಜನತಾ ಪಕ್ಷದಲ್ಲಿ ಜನತಾ ಎಂಬುದು ಸಾಮಾನ್ಯ ಪದ. ಹೀಗಾಗಿ ಈ ಹೆಸರು ಸೂಕ್ತ ಎಂದು ಬಿಜೆಪಿ ಹೇಳಿಕೊಂಡಿದೆ.

ಜನತಾ ರಂಗ, ಜನತಾದಳ ಅಭಿವೃದ್ಧಿ ಪಂಥ ಎಂಬ ಹೆಸರುಗಳೂ ಸಹಾ ಕೇಳಿಬರುತ್ತಿವೆ. ಅಂತಿಮ ಹೆಸರು ಸದ್ಯದಲ್ಲಿಯೇ ಘೋಷನೆಯಾಗಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X