ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಮನ ತುಂಬಿದ ಶ್ವೇತಾ ಅಯ್ಯಂಗಾರ್‌ ರಂಗಪ್ರವೇಶ

By Staff
|
Google Oneindia Kannada News

ಕಣ್ಮನ ತುಂಬಿದ ಶ್ವೇತಾ ಅಯ್ಯಂಗಾರ್‌ ರಂಗಪ್ರವೇಶ
ನೃತ್ಯಾಭಿಯನದಲ್ಲಿ ಪ್ರೌಢಿಮೆ, ಪ್ರಥಮದಲ್ಲೇ ಪ್ರಭಾವ ಬೀರಿದ ಯುವಪ್ರತಿಭೆ...

ಬೆಂಗಳೂರು : ಭರತನಾಟ್ಯ ಕ್ಷೇತ್ರದ ಯುವ ಪ್ರತಿಭೆ ಕುಮಾರಿ ಎಚ್‌.ಎಸ್‌.ಶ್ವೇತಾ ಅಯ್ಯಂಗಾರ್‌ ರಂಗಪ್ರವೇಶ ರವೀಂದ್ರ ಕಲಾಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಶುಕ್ರವಾರ ಜನವರಿ 27ರಂದು ಕಾರ್ಯಕ್ರಮ ನಡೆಯಿತು. ರುಸಲೀ ರಾಧಾ, ರುಸಲಾ ಮಾಧವ, ರುಸಲೀ ಸಾರೇ ಗೋಕುಲ... ಎಂಬ ಮರಾಠಿ ಗೀತೆಗೆ ಹೆಜ್ಜೆಹಾಕುತ್ತಿರುವಾಗ ಶ್ವೇತಾ ಪ್ರೌಢ ನೃತ್ಯಾಭಿನಯ ತೋರಿದರು. ಗುರು ಸಂಜಯ್‌ ಶಾಂತಾರಾಂ ರಚಿಸಿದ ಕನ್ನಡ ತಿಲ್ಲಾನಕ್ಕೂ ಗಮನಾರ್ಹ ಪ್ರದರ್ಶನ ನೀಡಿದರು.

6ನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಯಲಾರಂಭಿಸಿದ ಶ್ವೇತಾ ಅವರ ಮೊದಲ ನೃತ್ಯಗುರು ಶ್ಯಾಮಲಾ ಅಶ್ವಥ್‌. ಪ್ರಸ್ತುತ ನೃತ್ಯದಂಪತಿಗಳಾದ ಸಂಜಯ್‌-ಶಮಾ ಅವರ ಶಿಷ್ಯೆಯಾಗಿರುವ ಇವರು ಶಿವಪ್ರಿಯ ನೃತ್ಯಶಾಲೆಯ ವಿದ್ಯಾರ್ಥಿನಿ. ತಂದೆ ಎಚ್‌.ವಿ.ಶ್ರೀನಿವಾಸ್‌ ಅಯ್ಯಂಗಾರ್‌ ಹಾಗೂ ತಾಯಿ ಲತಾ ಅವರ ನಿರಂತರ ಪ್ರೋತ್ಸಾಹದಿಂದ ನೃತ್ಯಾಧ್ಯಯನ ಮುಂದುವರಿಸಿದ್ದಾರೆ.

ಪಿಇಎಸ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ., ಓದುತ್ತಿದ್ದಾರೆ. ಅಲ್ಲದೆ ಉದಯ ಟಿವಿಯಲ್ಲಿ ನಿರೂಪಕಿಯಾಗಿ ಅನೇಕ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ. ಆದರೆ ನೃತ್ಯಕ್ಷೇತ್ರದತ್ತ ಅಪಾರ ಆಸಕ್ತಿ ಹಾಗೂ ಶ್ರದ್ಧೆ ಇಟ್ಟುಕೊಂಡಿರುವ ಶ್ವೇತಾ ಹೆಚ್ಚಿನ ಸಾಧನೆ ತೋರುವ ಇಚ್ಛೆ ಹೊಂದಿದ್ದಾರೆ.

ಹಲವು ಅಂತರ್‌ಕಾಲೇಜು ನೃತ್ಯ ಸ್ಪರ್ಧೆಗಳಲ್ಲಿ ವಿಜೇತೆಯಾಗಿದ್ದಾರೆ. ಅನೇಕ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಅವುಗಳಲ್ಲಿ ಮೈಸೂರು ದಸರಾ ಉತ್ಸವದದಲ್ಲಿ ನಡೆಯುವ ಪ್ರತಿಷ್ಠಿತ ನೃತ್ಯೋತ್ಸವೂ ಸೇರಿದೆ.

ನೃತ್ಯಕ್ಷೇತ್ರದಲ್ಲಿ ಕನ್ನಡ ನಾಡಿನ ಕೀರ್ತಿ ದಿಗಂತದೆತ್ತರಕ್ಕೆ ಕೊಂಡೊಯ್ದ ಹಲವು ಖ್ಯಾತನಾಮರಿದ್ದಾರೆ. ಅವರಲ್ಲಿ ಮೊದಲಿಗರೆಂದರೆ ಹೊಯ್ಸಳ ರಾಜ ವಿಷ್ಣುವರ್ಧನನ ಹೆಂಡತಿ ನಾಟ್ಯರಾಣಿ ಶಾಂತಲೆ.

ಡಾ.ಮಾಯಾರಾವ್‌, ವಸುಂಧರಾ ದೊರೆಸ್ವಾಮಿ, ವಾಣಿ ಗಣಪತಿ, ಅನುರಾಧಾ-ಶ್ರೀಧರ್‌, ಶಮಾ-ಸಂಜಯ್‌ ಮೊದಲಾದವರು ಅಂತರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ. ಕನ್ನಡದ ನವಪ್ರತಿಭೆ ಶ್ವೇತಾ ಕೂಡ ಜಗದ್ವಿಖ್ಯಾತಿ ಪಡೆಯಲಿ ಎಂದು ದಟ್ಸ್‌ಕನ್ನಡ ಮನಃಪೂರ್ವಕವಾಗಿ ಹಾರೈಸುತ್ತದೆ.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹಿರಿಯ ಚಿತ್ರನಟ ದ್ವಾರಕೀಶ್‌, ಹಿರಿಯ ಚಿತ್ರನಟಿ ಹೇಮಾ ಚೌಧರಿ ಮೊದಲಾದವರು ಆಗಮಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಮಾ ಸಂಜಯ್‌ ನಿರ್ವಹಿಸಿದರೆ, ವಂದನಾರ್ಪಣೆಯನ್ನು ಸಂಜಯ್‌ ಮಾಡಿದರು.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X