ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ.ಎಚ್ಚೆನ್‌ ಸ್ಮರಣಾರ್ಥ ಅಂತರ ಕಾಲೇಜು ನಾಟಕ ಸ್ಪರ್ಧೆ

By Staff
|
Google Oneindia Kannada News

ದಿ.ಎಚ್ಚೆನ್‌ ಸ್ಮರಣಾರ್ಥ ಅಂತರ ಕಾಲೇಜು ನಾಟಕ ಸ್ಪರ್ಧೆ
ದಿನಕ್ಕೊಂದು ನಾಟಕ, ಮನಕ್ಕೊಂದು ಮನರಂಜನೆ...

ಬೆಂಗಳೂರು : ದಿವಂಗತ ಡಾ.ಎಚ್‌. ನರಸಿಂಹಯ್ಯ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಜನವರಿ 21ರಿಂದ ನಾಟಕೋತ್ಸವಗಳು ನಡೆಲಿದೆ.

ಬಸವನ ಗುಡಿ ನ್ಯಾಷನಲ್‌ ಕಾಲೇಜು ಹಾಗೂ ಬೆಂಗಳೂರು ಲಲಿತಾ ಕಲಾ ಪರಿಷತ್‌ ಆಶ್ರದಲ್ಲಿ ಈ ನಾಟಕೋತ್ಸವನ್ನು ಆಯೋಜಿಸಲಾಗಿದೆ. ಜನವರಿ 31ರಂದು ನಡೆಯಲಿರುವ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ, ಎನ್‌.ಇ.ಎಸ್‌ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಚ್‌.ರಾಮರಾವ್‌ ಅಧ್ಯಕ್ಷತೆ ವಹಿಸುವರು. ನಾಟಕಗಳು ಜಯನಗರದ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ನಡೆಯಲಿವೆ.

  • ಜನವರಿ 31- ಸಂಜೆ 6ಗಂಟೆಗೆ ಸುರಾನಾ ಕಾಲೇಜು ವಿದ್ಯಾರ್ಥಿಗಳಿಂದ ‘ಮೂರು ಕಾಸಿನ ಸಂಗೀತ’ ನಾಟಕ.
  • ಫೆಬ್ರವರಿ 1- ಸಂಜೆ 5ಗಂಟೆಗೆ ಎನ್‌ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿಗಳಿಂದ ‘ನೆನಪಿನಂಗಳದಲ್ಲಿ ನೂರು ಚಿತ್ತಾರ’ ಹಾಗೂ ಸಂಜೆ 7ಗಂಟೆಗೆ ಚಿತ್ರಕಲಾ ಪರಿಷತ್‌ ವತಿಯಿಂದ ಒಂದು ಸೈನಿಕ ವೃತ್ತಾಂತ.
  • ಫೆಬ್ರವರಿ 3- ಸಂಜೆ 5ಗಂಟೆಗೆ ಬಿಎಚ್‌ಎಸ್‌ ಕಾಲೇಜು ವಿದ್ಯಾರ್ಥಿಗಳಿಂದ ‘ಕಾಕನ ಕೋಟೆ’ ಹಾಗೂ ಸಂಜೆ 7ಗಂಟೆಗೆ ಜಯನಗರ ನ್ಯಾಷನಲ್‌ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ‘ಶ್ರದ್ಧಾ’ .
  • ಫೆಬ್ರವರಿ 4- ಸಂಜೆ 5ಗಂಟೆಗೆ ಎಂಇಎಸ್‌ ಕಾಲೇಜು ವಿದ್ಯಾರ್ಥಿಗಳಿಂದ ಎಂಥಾ ಮೋಜಿನ ಕುದುರೆ ಹಾಗೂ ಸಂಜೆ 7ಕ್ಕೆ ಜಯನಗರದ ನ್ಯಾಷನಲ್‌ ಪಿಯು ಕಾಲೇಜು ವಿದ್ಯಾರ್ಥಿಗಳಿಂದ‘ ಕಾನನದ ಕಗ್ಗತ್ತಲಿಂದ’ ನಾಟಕ.
  • ಫೆಬ್ರವರಿ 5- ಸಂಜೆ 5ಗಂಟೆಗೆ ಎಸ್‌.ಎಸ್‌.ಎಂ.ಆರ್‌.ವಿ ಕಾಲೇಜು ವಿದ್ಯಾರ್ಥಿಗಳಿಂದ ‘ಮಾತೃಕಾ’ ಹಾಗೂ ಸಂಜೆ 7ಗಂಟೆಗೆ ಬಸವನಗುಡಿ ನ್ಯಾಷನಲ್‌ ಕಾಲೇಜು ವಿದ್ಯಾರ್ಥಿಗಳಿಂದ ‘ಹಳ್ಳಿಯೂರ ಹಮ್ಮೀರ’ ನಾಟಕ
  • ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X