ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ-ಕಷ್ಟ : ಎನ್‌ಕೌಂಟರ್‌ ದಯಾನಾಯಕ್‌ ಅಮಾನತು

By Staff
|
Google Oneindia Kannada News

ಭ್ರಷ್ಟ-ಕಷ್ಟ : ಎನ್‌ಕೌಂಟರ್‌ ದಯಾನಾಯಕ್‌ ಅಮಾನತು
ದಯಾನಾಯಕ್‌ ಕುಟುಂಬದವರ ಹೆಸರಲ್ಲಿ 100 ಕೋಟಿ ಆಸ್ತಿ?

ಮುಂಬೈ : ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಸಿರುವ ಆರೋಪ ಎದುರಿಸುತ್ತಿರುವ ಎನ್‌ಕೌಂಟರ್‌ ಸ್ಪೆಷಲಿಸ್ಟ್‌, ಕನ್ನಡಿಗ, ಇನ್ಸ್‌ಪೆಕ್ಟರ್‌ ದಯಾನಾಯಕ್‌ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ದಯಾನಾಯಕ್‌, ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ದಯಾನಾಯಕ್‌ ಅವರ ನಿವಾಸದ ಮೇಲೆ ಕಳೆದ ವಾರ ದಾಳಿ ನಡೆಸಿದ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)ದ ಅಧಿಕಾರಿಗಳು, 42ಲಕ್ಷ ಮೌಲ್ಯದ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದರು. ದಯಾನಾಯಕ್‌ ಕುಟುಂಬದ ಹೆಸರಲ್ಲಿ ಸುಮಾರು 100ಕೋಟಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ.

ಕಳೆದ ಹತ್ತು ವರ್ಷಗಳಿಂದ ಮುಂಬೈನಲ್ಲಿ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನದಂತಿದ್ದ ದಯಾನಾಯಕ್‌, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X