ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮ್‌ಜಿ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ಅಸಿಂಧು

By Staff
|
Google Oneindia Kannada News

ಪ್ರೇಮ್‌ಜಿ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ಅಸಿಂಧು
ವಿಪ್ರೋ ವಿರುದ್ಧ ಆರ್‌.ಕೆ.ರಾಜ್‌ರಿಂದ ಕಾನೂನು ಹೋರಾಟ

ಬೆಂಗಳೂರು : ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜಿ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ರಾಜ್ಯ ಹೈಕೋಟ್‌ ವಜಾಗೊಳಿಸಿದೆ.

ಪ್ರೇಮ್‌ಜಿ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ್‌, ಈ ಪ್ರಕರಣದಲ್ಲಿ ಗುರುತರ ಅಪರಾಧ ಕಂಡುಬರುತಿಲ್ಲ. ಹೀಗಾಗಿ ಅನಗತ್ಯ ಕ್ರಮಗಳು ಬೇಡ ಎಂದು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಿನ್ನೆಲೆ : ಆರ್‌.ಕೆ.ರಾಜ್‌ ಎಂಬಾತ ನೀಡಿರುವ ದೂರಿನ ಹಿನ್ನೆಲೆ ವಿಚಾರಣೆ ನಡೆಯುತ್ತಿದೆ. ವರ್ತೂರು ಹೋಬಳಿಯ ಚಲಘಟ್ಟದಲ್ಲಿನ ಭೂಪ್ರದೇಶ ಅಭಿವೃದ್ಧಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ವಿಪ್ರೋ, ರಾಜು ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ಒಪ್ಪಂದ ಕಾರ್ಯರೂಪಕ್ಕೆ ಬರಲಿಲ್ಲ.

ಈ ಬೆಳವಣಿಗೆಯಿಂದ ದಾಖಲೆಗಳನ್ನು ಹಿಂದಿರುಗಿಸಲು ಕೋರಿದರೂ, ವಿಪ್ರೋ ಗಮನ ಹರಿಸಿಲ್ಲ ಎಂಬ ದೂರು ಆರ್‌.ಕೆ.ರಾಜ್‌ ಅವರದು. ಅಲ್ಲದೇ ಸುಲಿಗೆ, ವಂಚನೆ, ಅಪರಾಧಿಕ ಭಯೋತ್ಪಾದನೆ ಪ್ರಕರಣಗಳನ್ನು ಪ್ರೇಮ್‌ಜಿ ಸೇರಿದಂತೆ ಮೂವರ ವಿರುದ್ಧ ರಾಜ್‌ ದಾಖಲಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X