ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊಯೋಟಾ ಬೀಗ ತೆರವು, ಮುಷ್ಕರಕ್ಕೆ ಇನ್ನಷ್ಟು ಕಾವು

By Staff
|
Google Oneindia Kannada News

ಟೊಯೋಟಾ ಬೀಗ ತೆರವು, ಮುಷ್ಕರಕ್ಕೆ ಇನ್ನಷ್ಟು ಕಾವು
ಆಡಳಿತ ಮಂಡಳಿ ಮೇಲೆ ಕಾರ್ಮಿಕರ ಅಸಹನೆ, ಬಿಗಿಪಟ್ಟು

ಬೆಂಗಳೂರು : ಕಾರ್ಮಿಕರ ಒತ್ತಡಕ್ಕೆ ಮಣಿದ ಟೊಯೋಟಾ ಕಂಪನಿ, ಕಾರ್ಖಾನೆಗೆ ಹಾಕಿದ್ದ ಬೀಗವನ್ನು ತೆರವುಗೊಳಿಸಿದೆ. ಸೇವೆಗೆ ಕಾರ್ಮಿಕರನ್ನು ಆಹ್ವಾನಿಸಿದೆ. ಆದರೆ ಕಾರ್ಮಿಕರು ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಷರತ್ತು ಪತ್ರಕ್ಕೆ ಸಹಿ ಹಾಕಿ, ಕಾರ್ಮಿಕರು ಶನಿವಾರದಿಂದ ಕಾರ್ಖಾನೆಯಲ್ಲಿ ಕೆಲಸ ಮಾಡಬಹುದು ಎಂದು ಆಡಳಿತ ಮಂಡಳಿ ಸೂಚನೆ ನೀಡಿದೆ. ಷರತ್ತು ಪತ್ರಕ್ಕೆ ಸಹಿಹಾಕಬೇಕೆಂಬ ನಿಯಮವನ್ನು ಕಾರ್ಮಿಕರ ಸಂಘ ವಿರೋಧಿಸಿದೆ. ಹೀಗಾಗಿ ಮುಷ್ಕರ ಮತ್ತಷ್ಟು ಕಾವು ಪಡೆಯುವ ಸಾಧ್ಯತೆಗಳಿವೆ.

ಟೋಯೋಟಾ ಕಿರ್ಲೊಸ್ಕರ್‌ ಮೋಟರ್‌ ಫ್ಯಾಕ್ಟರಿಯಲ್ಲಿ ಕಳೆದ ಹದಿನೈದು ದಿನಗಳಿಂದ ಮುಷ್ಕರ ನಡೆಯುತ್ತಿದ್ದು, ಆಡಳಿತ ಮಂಡಳಿ ಜ.8ರಂದು ಕಾರ್ಖಾನೆಗೆ ಬೀಗ ಜಡಿದಿತ್ತು. ಶುಕ್ರವಾರ ಕಾರ್ಖಾನೆಯ ಬೀಗವನ್ನು ಆಡಳಿತ ಮಂಡಳಿ ತೆರವುಗೊಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X