• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೋವಾದತ್ತ ಕುಮಾರಣ್ಣನ ಗುಂಪು, ಚೆನ್ನೈನತ್ತ ಬಿಜೆಪಿ

By Staff
|

ಗೋವಾದತ್ತ ಕುಮಾರಣ್ಣನ ಗುಂಪು, ಚೆನ್ನೈನತ್ತ ಬಿಜೆಪಿ

ಕುದುರೆ ವ್ಯಾಪಾರ ತಪ್ಪಿಸಲು ನಾನಾ ಕಸರತ್ತು, ಜ.27ರ ತನಕ ಜೆಡಿಎಸ್‌-ಬಿಜೆಪಿ ಶಾಸಕರಿಗೆ ಅಜ್ಞಾತವಾಸ

ಬೆಂಗಳೂರು : ಕುದುರೆ ವ್ಯಾಪಾರದ ಭೀತಿಯಿಂದ ಜೆಡಿಎಸ್‌ ಕಾರ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ತಮ್ಮ ಬೆಂಬಲಿಗ ಶಾಸಕರನ್ನು, ಶನಿವಾರ ಗೋವಾಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ನಗರದ ಹೊರವಲಯದ ರೆಸಾರ್ಟ್‌ ಒಂದರಲ್ಲಿ ತಂಗಿದ್ದ ಕುಮಾರಸ್ವಾಮಿ ಬಣ, ರಹಸ್ಯ ತಾಣಗಳನ್ನು ಬದಲಾಯಿಸುತ್ತಿದೆ. ಶನಿವಾರ ಬೆಳಗ್ಗೆ ವಿಮಾನದ ಮೂಲಕ 46 ಶಾಸಕರು ಗೋವಾ ತಲುಪಿಸಬಹುದು ಎಂದು ಮೂಲಗಳು ತಿಳಿಸಿವೆ.

ಇನ್ನೊಂದು ಕಡೆ ಬಿಜೆಪಿ, ಇದೇ ತಂತ್ರವನ್ನು ಬಳಸುತ್ತಿದೆ. ಶುಕ್ರವಾರ ರಾತ್ರಿ ಬಿಜೆಪಿಯ ಶಾಸಕರು ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ ಜೈಪುರ್‌ ಅಥವಾ ಹೊಸದಿಲ್ಲಿಗೆ ತೆರಳಿದರೂ ತೆರಳಬಹುದು ಎನ್ನಲಾಗಿದೆ.

ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ಮೋಜು ಮಾಡಲು ಮತ್ತು ಸುತ್ತಾಡಲು ಇದೊಂದು ಬಯಸದೇ ಬಂದ ಅವಕಾಶ. ಆದರೆ ಸ್ವಾತಂತ್ರ್ಯಕ್ಕೆ ಒಂದಿಷ್ಟು ಕಡಿವಾಣಗಳಿವೆ! ಜ.27ರ ತನಕ, ಈ ಕಸರತ್ತು ಮುಂದುವರೆಯುವ ಸಾಧ್ಯತೆಗಳಿವೆ.

ಈ ಶಾಸಕರನ್ನು ಇತರರು ಸಂಪರ್ಕಿಸದಂತೆ, ಪಕ್ಷದ ಮುಖಂಡರು ಎಚ್ಚರವಹಿಸಿದ್ದಾರೆ. ಮೊಬೈಲ್‌ಗಳನ್ನು ಬಳಸದಂತೆ ಸೂಚಿಸಲಾಗಿದ್ದು, ದಿನಕ್ಕೆರಡು ಸಲ ತಮ್ಮ ಕುಟುಂಬದೊಂದಿಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more